Connect with us

LATEST NEWS

ತಾಯಿಯನ್ನು ಕೊಂದು ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದ ಆರೋಪಿ ಮೆಲ್ವಿನ್ ಮೊಂತೆರೊ ಬೈಂದೂರಿನಲ್ಲಿ ಅರೆಸ್ಟ್

ಬೈಂದೂರು, ಜೂನ್ 26: ಮಂಜೇಶ್ವರದ ವರ್ಕಾಡಿಯಲ್ಲಿ ತನ್ನ ತಾಯಿಯನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿ ಪರಾರಿಯಾಗಿದ್ದ ಆರೋಪಿ ಮೆಲ್ವಿನ್ ಮೊಂತೆರೊ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯನ್ನು ಮೊಬೈಲ್ ಲೊಕೇಷನ್ ಆಧಾರದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಆರೋಪಿ ಮೆಲ್ವಿನ್ ಮಲಗಿದ್ದ ತಾಯಿ ಹಿಲ್ಡಾ ಅವರನ್ನು ಕೊಲೆಗೈದು ನಂತರ ಸುಟ್ಟು ಹಾಕಿ ಮನೆ ಸಮೀಪದ ಪೊದೆಗೆ ಎಸೆದಿದ್ದನು. ಮನೆಗೆ ಬಂದಿದ್ದ ನೆರೆಮನೆಯ ಲೋಲಿಟಾ ಅವರನ್ನೂ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿ ಮೆಲ್ವಿನ್ ಹೊಸಂಗಡಿಗೆ ಆಟೋರಿಕ್ಷಾದಲ್ಲಿ ತಪ್ಪಿಸಿಕೊಂಡು ನಂತರ ಮಂಗಳೂರಿಗೆ ಆಗಮಿಸಿದ್ದು, ಅಲ್ಲಿಂದ ಕೊಲ್ಲೂರಿಗೆ ತೆರಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *