LATEST NEWS
ಮಣಿಪಾಲ – ಕುಡಿದ ನಶೆಯಲ್ಲಿ ಸ್ನೇಹಿತೆಯ ಮೇಲೆ ಅತ್ಯಾಚಾರ ಆರೋಪಿ ಆರೆಸ್ಟ್

ಮಣಿಪಾಲ ಅಕ್ಟೋಬರ್ 28: ಕುಡಿದ ಮತ್ತಿನಲ್ಲಿ ವಿಧ್ಯಾರ್ಥಿನಿಯೊರ್ವಳ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ನಡೆಸಿರುವ ಮಣಿಪಾಲದಲ್ಲಿ ನಡೆದಿದೆ.
ಅಕ್ಟೋಬರ್ 16 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಗ ವಿದ್ಯಾರ್ಥಿನಿಯು ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಹಿನ್ನಲೆಯಲ್ಲಿ ಪೊಲೀಸರು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೆಹಲಿ ಮೂಲದ ಆರ್ಯನ್ ಚಂದಾವನಿ ಎಂದು ಗುರುತಿಸಲಾಗಿದೆ.

ಅಕ್ಟೋಬರ್ 16ರಂದು ಇಂದ್ರಾಳಿಯ ಫ್ಲ್ಯಾಟ್ ನಲ್ಲಿ ಕುಡಿದ ನಶೆಯಲ್ಲಿ ಗೆಳತಿಯ ಮೇಲೆ ಆರೋಪಿ ಆರ್ಯನ್ ಚಂದಾವನಿ ಅತ್ಯಾಚಾರ ನಡೆಸಿದ ಆರೋಪ ಆತನ ಮೇಲಿದೆ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ