LATEST NEWS
ಮೈದುಂಬಿದ.. ಮಣಿಪಾಲದ ಅರ್ಬಿ ಫಾಲ್ಸ್..

ಉಡುಪಿ ಜುಲೈ 09: ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಮೂಲಕ ವೈಷ್ಣವಿ ದುರ್ಗಾ ದೇವಸ್ಥಾನದ ಬಳಿಯಲ್ಲಿರುವ ಈ ಅರ್ಬಿ ರ್ಫಾಲ್ಸ್ ಇದೀಗ ಸತತ ಮಳೆ ಬಂದಿರುವ ಹಿನ್ನೆಲೆಯಲ್ಲಿ ಈ ಫಾಲ್ಸ್ ಮೈದುಂಬಿ ಹರಿಯುತ್ತಿದೆ.
ಈ ಫಾಲ್ಸ್ ನ ನೀರು ಬೆಟ್ಟದ ಮಧ್ಯದಲ್ಲಿ ಇಳಿಜಾರು ಪ್ರದೇಶದಲ್ಲಿ ಬರುವಂತಹ ಜರಿಯ ನೋಟ ಕಣ್ತುಂಬುವಂತದ್ದು. ಕುಟುಂಬ ಸಮೇತರಾಗಿ ಬಂದು. ಇಲ್ಲಿ ಬೋರ್ಗೆರೆವ ಜಲಪಾತದ ವೈಭವವನ್ನು ಕಾಣಬಹುದು. ಪರ್ಕಳದ ಮೂಲಕವೂ ಮುಂದೆ ಸಾಗಿ 80ನೇ ಬಡೆದು ಬಿಟ್ಟು ಪಂಚಾಯತ್.ನ ಹಿಂಬದಿ ರಸ್ತೆಯಲ್ಲಿ ಚಲಿಸಿ ಮುಂದಕ್ಕೆ ಸಾಗಿ ಮಣೆಪಾಲ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋಗುವ ದಾರಿಯಲ್ಲಿಯೂ ಕೂಡ ಸಂಚರಿಸಿಈ ಜಲಪಾತದ ವೈಭವ ಕಾಣಬಹುದು. ಈ ಫಾಲ್ಸ್ ಗೆ ಬರಲು ಉತ್ತಮ ರಸ್ತೆಯ ವ್ಯವಸ್ಥೆ ಇದೆ, ಎರಡು ಕಡೆಯಿಂದ ಈ ಜಲಪಾತಕ್ಕೆ ಸಂಪರ್ಕಿಸುವ ರಸ್ತೆ ಇದೆ.

ಪ್ರವಾಸಿಗರು ಬರುವವರು ಪಕ್ಕದಲ್ಲಿ ದೇವಸ್ಥಾನ ಇರುವುದರಿಂದ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ವಿನಂತಿಸಿದ್ದಾರೆ.