Connect with us

DAKSHINA KANNADA

ಪುತ್ತೂರು -ಕುಸಿದ ಗುಡ್ಡ ಮಾಣಿ ಮೈಸೂರು ಹೆದ್ದಾರಿ ಬಂದ್

ಪುತ್ತೂರು ಅಗಸ್ಟ್ 2: ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮಾಣಿ-ಮೈಸೂರು ಹೆದ್ದಾರಿ ಬಂದ್ ಆಗಿದೆ.


ಪುತ್ತೂರಿನ ಬೈಪಾಸ್ ರಸ್ತೆ ಬಪ್ಪಳಿಗೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮುಂಜಾನೆ ವೇಳೆ ಗುಡ್ಡ ಕುಸಿದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಈ ಹಿನ್ನಲೆ ಯಾವುದೇ ಅಪಾಯ ಉಂಟಾಗಿಲ್ಲ.

ಬೈಪಾಸ್ ರಸ್ತೆಗೆ ಗುಡ್ಡ ಕುಸಿದ ಕಾರಣ ರಸ್ತೆ ಸಂಪೂರ್ಣ ಬಂದ್ ಆಗಿದೆ. ಮಡಿಕೇರಿ-ಮೈಸೂರುಗೆ ಪ್ರಯಾಣಿಸುವವರು ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಒಳಗಡೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗುಡ್ಡ ಕುಸಿದ ಪರಿಣಾಮ ದೇವಿ ದೇವಸ್ಥಾನ ಹಾಗೂ ಮನೆ ಅಪಾಯದ ಸ್ಥಿತಿಯಲ್ಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *