DAKSHINA KANNADA
ಮಂಗಳೂರು : ಸಮುದ್ರದಲ್ಲಿ ಮೀನು ಹಿಡಿಯಲು ಹೋದ ಯುವಕ ದುರ್ಮರಣ..!

ಮಂಗಳೂರು : ಮೀನು ಹಿಡಿಯಲು ಹೋದ ವ್ಯಕ್ತಿ ಗಾಳಿ ಹಾಗೂ ಅಲೆಗಳ ರಭಸಕ್ಕೆ ಸಿಕ್ಕಿ ದುರ್ಮರಣ ಹೊಂದಿದ ಘಟನೆ ಮಂಗಳೂರಿನ ತೋಟ ಬೆಂಗ್ರೆ ಸಮುದ್ರದಲ್ಲಿ ನಡೆದಿದೆ.
ಗುರುವಾರ ಸಂಜೆ ಸಂಜೆ 5:30ಕ್ಕೆ ಬೆಂಗ್ರೆ ಮಿಥುನ ರವರ ಮಗನಾದ ಪ್ರಜೀತ್ ಎಂ ತಿಂಗಳಾಯ ಎನ್ನುವ ವ್ಯಕ್ತಿ ತನ್ನ ಮನೆಯ ಬಡತನ ಹೇಗೂ ವಿದ್ಯಾಭ್ಯಾಸದ ವ್ಯವಸ್ಥೆಗೆ, ತನ್ನ ತಂದೆಯ ಜೊತೆ ಬೆಂಗ್ರೆ ಸಮುದ್ರದಲ್ಲಿ ಮಿನುಗಾರಿಕೆಗೆ ಹೋದ ಸಂಧರ್ಭದಲ್ಲಿ, ಗಾಳಿ ರಭಸಕ್ಕೆ ಸಿಕ್ಕಿ, ಸಮುದ್ರದಲ್ಲಿ ನೀರು ಪಾಲಾಗಿದ್ದಾನೆ. ನಂತರ ಸ್ಥಳದಲ್ಲಿ ಮೀನುಗಳು ಮತ್ತಿತರ ವಸ್ತುಗಳು ಸಿಕ್ಕಿದ್ದರಿಂದ ಅನುಮಾನಗೊಂಡು ಸಮದ್ರದಲ್ಲಿ ಹುಡುಗಾಟ ನಡೆಸಿದ್ದಾರೆ. 6:50 ರ ಸುಮಾರಿಗೆ ಮೃತದೇಹವು ಅಲೆಗಳ ರಬಸಕ್ಕೆ ಮೇಲೆ ಬಂದಿದ್ದು ಸ್ಥಳಿಯರು ಮೇಲೆತ್ತಿ ಆಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
