DAKSHINA KANNADA
ಮಂಗಳೂರು :ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿ,ಸೂಕ್ತ ದಾಖಲೆ ಇಲ್ಲದ ರೂ. 1. 32 ಲಕ್ಷ ನಗದು ವಶಕ್ಕೆ..!.

ಮಂಗಳೂರು : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಅಕ್ರಮ ಹಣ ಸಾಗಾಟ ವಹಿವಾಟಿನ ಮೇಲೆ ಚುನಾವಣ ಆಯೋಗ ಹದ್ದಿನ ಕಣ್ಣಿಟ್ಟಿದೆ. ಮಂಗಳೂರು ನಗರದ ಹೊರವಲಯದ ಬಡಗ ಎಡಪದವು ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.32 ಲಕ್ಷ ರೂಪಾಯಿ ನಗದು ಚುನಾವಣ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಚೆಕ್ ಪೋಸ್ಟಿನಲ್ಲಿ ಚುನಾವಣಾ ಅಧಿಕಾರಿಗಳ ತಪಾಸಣೆ ವೇಳೆ ಈ ಹಣ ಸಿಕ್ಕಿದೆ. ಭಾನುವಾರ ತಡರಾತ್ರಿ ಕೈಕಂಬ ನಿವಾಸಿಯೋರ್ವರು ಹುಂಡೈ ಕಾರಲ್ಲಿ ಈ ಹಣವನ್ನು ಕೊಂಡೊಯ್ಯುವಾಗ ಮಂಗಳೂರು ನಗರದ ಹೊರವಲಯದ ಬಡಗ ಎಡಪದವು ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಸೂಕ್ತ ದಾಖಲೆ ಸಲ್ಲಿಸಿದ ಬಳಿಕ ಹಣ ನೀಡುವುದಾಗಿ ಆ ವ್ಯಕ್ತಿಗೆ ಸೂಚಿಸಿದ್ದಾರೆ.
