Connect with us

    KARNATAKA

    ಮಂಗಳೂರು : ಬೆನ್ನುಹುರಿ ಅಪಘಾತಗಳಿಂದ ಬಳಲುತ್ತಿರುವವರ ಗಾಲಿ ಕುರ್ಚಿ ರಾಲಿ..!

    ಬೆನ್ನುಹುರಿ ಅಪಘಾತಗಳಿಂದ ಬಳಲುತ್ತಿರುವವರ ರಾಜ್ಯ ಮಟ್ಟದ ಮೂರು ದಿನಗಳ ಪುನಶ್ಚೇತನ ಸಮಾವೇಶ ಮಂಗಳೂರಿನಲ್ಲಿ ಮಂಗಳವಾರ ಸಮಾಪನಗೊಂಡಿತು.

    ಮಂಗಳೂರು : ಬೆನ್ನುಹುರಿ ಅಪಘಾತಗಳಿಂದ ಬಳಲುತ್ತಿರುವವರ ರಾಜ್ಯ ಮಟ್ಟದ ಮೂರು ದಿನಗಳ ಪುನಶ್ಚೇತನ ಸಮಾವೇಶ ಮಂಗಳೂರಿನಲ್ಲಿ ಮಂಗಳವಾರ ಸಮಾಪನಗೊಂಡಿತು.

     

    ನಮಗೆ ಅನುಕಂಪ ಬೇಡ, ಅವಕಾಶ ಕೊಡಿ ಎಂಬ ಘೋಷ ವಾಕ್ಯದೊಂದಿಗೆ ಜನರಿಗೆ ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವವ ವೇದನೆ ಬಗ್ಗೆ ಜಾಗೃತಿ ಮೂಡಿಸಲು ನಗರದ ಮೋತಿಮಹಲ್‌ ನಿಂದ ನೆಹರು ಮೈದಾನಿನ ವರೆಗೆ ಗಾಲಿ ಕುರ್ಚಿಯ ರಾಲಿಯನ್ನು ಆಯೋಜಿಸಲಾಗಿತ್ತು.

    ರಾಜ್ಯದ 28 ಜಿಲ್ಲೆಗಳಿಂದ 168 ಮಂದಿ ಪ್ರತಿನಿಧಿಗಳು ಈ ಗಾಲಿ ಕುರ್ಚಿ ರಾಲಿಯಲ್ಲಿ ಪಾಲ್ಗೊಂಡಿದ್ದರು.

    ಮೂರು ದಿನಗಳ ಸಮಾವೇಶದ ಬಗ್ಗೆ ಮಾತನಾಡಿದ ಸೇವಾಧಾಮ ಸಂಸ್ಥೆಯ ಸಂಸ್ಥಾಪಕರು ಮತ್ತು ಸೇವಾ ಭಾರತಿ ಸಂಸ್ಥೆಯ ಖಜಾಂಜಿಗಳಾದ ಕೆ.ವಿನಾಯಕ ರಾವ್ ಅವರು ಬೆನ್ನು ಹುರಿಯ ಅಪಘಾತವಾದ ಬಳಿಕ ಆ ನೋವಿನಲ್ಲಿದ್ದವರನ್ನು ಸಮಾಜ ಕಣ್ಣೆತ್ತಿ ಕೂಡ ನೋಡುತ್ತಿಲ್ಲ, 

    ಅವರು ಪಡುವ ವೇದನೆ, ದಿನಾ ಅನುಭವಿಸುವ ನರಕ ಯಾತನೆಗಳಿಗೆ ಜೀವನ ಪರ್ಯಾಂತ ಮುಕ್ತಿ ಇಲ್ಲ.

    ಈ ಹಿನ್ನೆಲೆಯಲ್ಲಿ ಅವರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯವನ್ನು ಸಂಘಟನೆ ಮಾಡುತ್ತಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ಬೆನ್ನು ಹುರಿಯಿಂದ ಬಳಲುತ್ತಿರುವ ಸುಮಾರು 600 ಮಂದಿಯನ್ನು ಗುರುತ್ತಿಸಿದ್ದು ಅವರಿಗೆ ಪುನಶ್ಚೇತನ ನೀಡಿ ಹೊಸ ಬದುಕನ್ನು ನೀಡುವ ಕಾರ್ಯ ಮಾಡುತ್ತಿದೆ.

    ನಾವು ಯಾವ ಸಂಘ-ಸಂಸ್ಥೆಗಳಿಗಾಗಲಿ ಸಮಾಜಕ್ಕಾಗಲಿ ಹೊರೆಯಾಗಲು ಬಯಸುವುದಿಲ್ಲ.

    ನಮಗೆ ಅನುಕಂಪ ಬೇಡ, ಅವಕಾಶ ಕೊಡಿ” ಆನೇಕ ಪ್ರಮುಖ ಬೇಡಿಗಳನ್ನ ಸರ್ಕಾರದ ಮುಂದಿಟ್ಟಿದ್ದೇವೆ,

    ಪ್ರತೀ ಜಿಲ್ಲೆಗೊಂದು ಬೆನ್ನು ಹುರಿ ಅಪಘಾತಗಳಿಂದ ಬಳಲುತ್ತಿರುವವರಿಗೆ ಪುನಶ್ಚೇತನ ಕೇಂದ್ರ ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

    ಈ ಮೂರು ದಿನಗಳ ಸಮಾವೇಶದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳು ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *