LATEST NEWS
ಪೊಲೀಸರ ವಾಟ್ಸಪ್ ಗ್ರೂಪ್ ಗೆ ಬಂದಿದೆ 30 ಸಾವಿರಕ್ಕೂ ಹೆಚ್ಚು ಮಂಗಳೂರು ಗಲಭೆ ವಿಡಿಯೋಗಳು…!
ಪೊಲೀಸರ ವಾಟ್ಸಪ್ ಗ್ರೂಪ್ ಗೆ ಬಂದಿದೆ 30 ಸಾವಿರಕ್ಕೂ ಹೆಚ್ಚು ಮಂಗಳೂರು ಗಲಭೆ ವಿಡಿಯೋಗಳು…!
ಮಂಗಳೂರು ಡಿಸೆಂಬರ್ 28: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನ ನಡೆದ ಗಲಭೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ವಾಟ್ಸಾಪ್ ನಂಬರ್ ಬರೋಬರಿ 30 ಸಾವಿರಕ್ಕೂ ಹೆಚ್ಚು ವಿಡಿಯೋಗಳು ಬಂದಿದ್ದು, ವಿಡಿಯೋಗಳನ್ನು ಸೈಬರ್ ಪೊಲೀಸರು ಪರಿಶೀಲಿನೆ ನಡೆಸುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ನಂತರ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ಗೆ ಇಬ್ಬರು ಬಲಿಯಾಗಿದ್ದರು.
ಪೊಲೀಸರ ಗೋಲಿಬಾರ್ ಗೆ ಇಬ್ಬರು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ವಿರುದ್ದವೇ ಗಲಭೆಯ ವಿಡಿಯೋಗಳು ಹರಡಲಾರಂಭಿಸಿದವು. ಇದೇ ವೇಳೆ ಗಲಭೆಗೆ ಕಾರಣರಾದವರನ್ನು ಗುರುತಿಸುವ ಉದ್ದೇಶದಿಂದ ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ ಸಾರ್ವಜನಿಕರ ಬಳಿ ಮಂಗಳೂರು ಗಲಭೆ ಸಂದರ್ಭದ ವಿಡಿಯೋಗಳು ಇದ್ದರೇ ಕಳುಹಿಸಿ ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸಾರ್ವಜನಿಕರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ.
ಸುಮಾರು 30ಸಾವಿರಕ್ಕೂ ಅಧಿಕ ವಿಡಿಯೋಗಳನ್ನು ನಾಗರೀಕರು ವಾಟ್ಸಪ್ ಗ್ರೂಪ್ ಮೂಲಕ ಕಳುಹಿಸಿದ್ದಾರೆ. ನಾಗರಿಕರು ಸಲ್ಲಿಸಿದ ವಿಡಿಯೋಗಳನ್ನು ಸೈಬರ್ ಪೊಲೀಸರು ಪರಿಶೀಲಿಸುತ್ತಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.