Connect with us

    LATEST NEWS

    ಕೇರಳದ ಪ್ರವಾಹದಲ್ಲಿ ಸಿಲುಕಿರುವ ಕರಾವಳಿ 200ಕ್ಕೂ ಅಧಿಕ ಮಂದಿ

    ಕೇರಳದ ಪ್ರವಾಹದಲ್ಲಿ ಸಿಲುಕಿರುವ ಕರಾವಳಿ 200ಕ್ಕೂ ಅಧಿಕ ಮಂದಿ

    ಮಂಗಳೂರು ಅಗಸ್ಟ್ 18: ಕೇರಳದ ಜಲಪ್ರಳಯದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸುಮಾರು 200ಕ್ಕಿಂತಲೂ ಅಧಿಕ ಮಂದಿ ಸಿಕ್ಕಿ ಹಾಕಿಕೊಂಡಿದ್ದು, ಅವರ ಸಂಪರ್ಕ ಕಡಿತಗೊಂಡಿದ್ದು, ಅವರ ಕುಟುಂಬಸ್ಥರು, ಸಂಬಂಧಿಗಳು ಆತಂಕಕ್ಕೀಡಾಗಿದೆ.

    ಕೇರಳದ ಡಿವೈನ್‌ ರಿಟ್ರೀಟ್‌ ಸೆಂಟರ್‌ಗೆ ಪ್ರಾರ್ಥನೆಗಾಗಿ ಮೂಡುಬಿದಿರೆ, ಕಾರ್ಕಳ, ಮುಡಿಪು, ಮಂಗಳೂರು ಸೇರಿದಂತೆ ನಾನಾ ಕಡೆಯಿಂದ 200ಕ್ಕೂ ಅಧಿಕ ಮಂದಿ ಪ್ರವಾಸಕ್ಕೆ ತೆರಳಿದ್ದರು. ಆದರೆ ಕಳೆದ 5 ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ, ನೆರೆಗೆ ಸಿಲುಕಿ ಕುಟುಂಬ ವರ್ಗದ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ.

    ಕೇರಳದಾದ್ಯಂತ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಅಲ್ಲಿ ವಿದ್ಯುತ್ , ದೂರವಾಣಿ ಸಂಪರ್ಕ ಕಡಿದು ಹೋಗಿದೆ. ಇಲ್ಲಿಂದ ತೆರಳಿದವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದರಿಂದ ಅವರ ಪರಿಸ್ಥಿತಿ ಎನಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ.

    ಈ ರಿಟ್ರೀಟ್ ಸೆಂಟರ್ ಕೇರಳದ ತ್ರಿಶೂರಿನ ಮುರಿಂಗೂರು ಎಂಬಲ್ಲಿದೆ. ಅಲ್ಲದೆ ತ್ರಿಶೂರು ಸುತ್ತಮುತ್ತ ಕೂಡ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಹೊರಗಿನ ಸಂಪರ್ಕವನ್ನು ಈ ಪ್ರದೇಶ ಕಡಿದುಕೊಂಡಿದೆ. ಕರಾವಳಿಯಿಂದ ತೆರಳಿದವರ 200ಕ್ಕೂ ಅಧಿಕ ಮಂದಿಯ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಮಾಹಿತಿ ಲಭಿಸುತ್ತಿಲ್ಲ.

    ನೆರೆಯಲ್ಲಿ ಸಿಲುಕಿದ ಮಂಗಳೂರಿನ ತಂಡಗಳು ಕಟ್ಟಡವೊಂದರ 3ನೇ ಮಹಡಿಯಲ್ಲಿದ್ದು, ಇದೇ ಕಟ್ಟಡದ 2 ಮಹಡಿ ಈಗಾಗಲೇ ಪ್ರವಾಹದಲ್ಲಿ ಮುಳುಗಿದ್ದು ಕ್ಷಣಕ್ಷಣಕ್ಕೆ ನೀರು ಏರಿಕೆಯಾಗುತ್ತಿದೆ ಎಂದು ಮೊಬೈಲ್‌ನಲ್ಲಿ ಮಾಹಿತಿ ನೀಡಿದ್ದರು. ಇದು ಮಾತ್ರವಲ್ಲದೆ ನಮ್ಮ ಜತೆ ಚಿಕ್ಕ ಮಕ್ಕಳು, ಹಿರಿಯರು, ಮಹಿಳೆಯರು ಇದ್ದಾರೆ. ತಿನ್ನಲು ಮಾತ್ರವಲ್ಲ ಕುಡಿಯಲು ಸಹ ನೀರಿಲ್ಲ, ನಮ್ಮನ್ನು ಹೇಗಾದರೂ ರಕ್ಷಣೆ ಮಾಡಿ ಎಂದು ಮಾಜಿ ಶಾಸಕ ಲೋಬೋ ಅವರಲ್ಲಿ ಅಲವತ್ತುಕೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *