LATEST NEWS
ಮಂಗಳೂರು – ಕೊರಗಜ್ಜನಿಗೆ ಕೈ ಮುಗಿದು ಕಾಣಿಕೆ ಡಬ್ಬಿ ಎಗರಿಸಿದ ಕಳ್ಳ

ಮಂಗಳೂರು ಎಪ್ರಿಲ್ 30: ಕಳ್ಳನೊಬ್ಬ ಕೊರಗಜ್ಜನಿಗೆ ಕೈ ಮುಗಿದು ಬೇಡಿಕೊಂಡು ಕೊನೆಗೆ ಕಾಣಿಕೆ ಡಬ್ಬಿಯನ್ನೆ ಕಳ್ಳತನ ಮಾಡಿದ ಘಟನೆ ಮಂಗಳೂರು ಹೊರವಲಯದ ಏರ್ ಪೋರ್ಟ್ ರಸ್ತೆಯಲ್ಲಿನ ಕೊರಗಜ್ಜನ ಕಟ್ಟೆಯಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಪ್ರಿಲ್ 29ರ ಮಂಗಳವಾರ 5:30ರ ಸುಮಾರಿಗೆ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿರುವಂತೆಯೇ ಕಳ್ಳ ಕೊರಗಜ್ಜನಿಗೆ ಭಕ್ತಿಯಿಂದ ಕೈ ಮುಗಿದ ಬೇಡಿಕೊಂಡಿದ್ದಾನೆ. ಬಳಿಕ ಕಟ್ಟೆಗೆ ಮೂರು ಸುತ್ತು ಬಂದು , ಸುತ್ತಮುತ್ತ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೊನೆಗೆ ಅಲ್ಲಿದ್ದ ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಕೃತ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.
