DAKSHINA KANNADA
ಮಂಗಳೂರು : ಮಾಣೂರು ಸುಬ್ರಹ್ಮಣ್ಯ ದೇವಳದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿದ ‘ನಾಟ್ಯ ಮಯೂರಿ’ ವಿಡಿಯೋ ವೈರಲ್ .!

ದೇವಸ್ಥಾನಕ್ಕೆ ಬರುವ ಭಕ್ತರು ನವಿಲನ್ನು ನೋಡಿಯೇ ಹೋಗುತ್ತಾರೆ. ಪ್ರಸ್ತುತ ಕಾಲಿಗೆ ಕಟ್ಟಿದ ಗೆಜ್ಜೆ ಸಪ್ಪಳದೊಂದಿಗೆ ತನ್ನ ನರ್ತನದ ಮೂಲಕ ಭಕ್ತರ ಕಣ್ಮನ ತಣಿಸುತ್ತಿದೆ ಈ ನಾಟ್ಯ ಮಯೂರಿ.
ಮಂಗಳೂರು : ಹತ್ತಾರು ಪುರಾಣ ಪ್ರಸಿದ್ದ ಮತ್ತು ಪವಿತ್ರ ದೇವಾಲಯಗಳ ಊರು ಮಂಗಳೂರು. ಇದರಲ್ಲಿ ಒಂದು ಮಾಣೂರು ಸುಬ್ರಹ್ಮಣ್ಯ ದೇವಳ ಸಾವಿರಾರು ಭಕ್ತರನ್ನು ಊರು ಪರ ಊರುಗಳಿಂದ ಆಕರ್ಷಿಸುತ್ತಿದೆ.

ಮಂಗಳೂರು ಹೊರವಲಯದ ನೀರುಮಾರ್ಗದ ಈ ಮಾಣೂರು ಶ್ರೀ ಅನಂತ ಪದ್ಮನಾಭ ದೇವಾಲಯದ ಈ ನವಿಲು ನಿರಂತರ ಸುದ್ದಿಯಲ್ಲಿರುತ್ತದೆ, ಸುಬ್ರಹ್ಮಣ್ಯ ದೇವರ ದರ್ಶಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಈ ನವಿಲಿನ ದರ್ಶನ ಸಿಕ್ಕೇ ಸಿಗುತ್ತದೆ ಮತ್ತು ಭಕ್ತರನ್ನು ದಿನಾ ಒಂದಲ್ಲ ಒಂದು ರೀತಿಯಲ್ಲಿ ಆಕರ್ಷಿಸುತ್ತಾ ಇರುತ್ತೆ. ಸದಾ ಅರ್ಚಕರ ಮನೆಯ ಮೇಲ್ಛಾವಣಿಯಲ್ಲಿರುವ ಈ ಮಯೂರಿ ಪೂಜೆ ಸಂದರ್ಭ ಇಳಿದು ಬಂದು ದೇವಾಳದಲ್ಲಿ ಸುತ್ತು ಬರುತ್ತಿದೆ, ಪೂಜೆ ಆಗುವ ವೇಳೆ ದೇವಾಲಯದ ಸನಿಹ ಬಂದು ಕುಳಿತುಕೊಳ್ಳುತ್ತದೆ.
ಒಮ್ಮೊಮ್ಮೆ ದೇವಸ್ಥಾನದೊಳಗೂ ಬರುತ್ತೆ. ಸಂಜೆಯಾದಾಗ ದೇವಸ್ಥಾನದ ಅರ್ಚಕರ ಮನೆ ಬಳಿ ಹೋಗುವ ಮಯೂರ ನವಿಲು ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಕರ್ಷಣೆಯ ಕೇಂದ್ರ ಬಿಂದು. ದೇವಸ್ಥಾನಕ್ಕೆ ಬರುವ ಭಕ್ತರು ನವಿಲನ್ನು ನೋಡಿಯೇ ಹೋಗುತ್ತಾರೆ.
ಪ್ರಸ್ತುತ ಕಾಲಿಗೆ ಕಟ್ಟಿದ ಗೆಜ್ಜೆ ಸಪ್ಪಳದೊಂದಿಗೆ ತನ್ನ ನರ್ತನದ ಮೂಲಕ ಭಕ್ತರ ಕಣ್ಮನ ತಣಿಸುತ್ತಿದೆ ಈ ನಾಟ್ಯ ಮಯೂರಿ. ಮಯೂರಿಯ ಈ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಫುಲ್ ವೈರಲ್ ಆಗಿದೆ.