LATEST NEWS
ಶಿರಾಢಿ ಘಾಟ್ ರಸ್ತೆ ಕಾಮಗಾರಿ ಯೋಜನೆ ಡಿಪಿಆರ್ ಸಿದ್ಧವಾಗುತ್ತಿದೆ – ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು ಎಪ್ರಿಲ್ 10: ಮಂಗಳೂರಿನಿಂದ ಸುಬ್ರಹ್ಮಣ್ಯ ಪುನರಾರಂಭವಾಗಲಿರುವ ಪ್ಯಾಸೆಂಜರ್ ರೈಲು ಸೇವೆಗೆ ಎಪ್ರಿಲ್ 12 ರಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಮಂಗಳೂರು ಸುಬ್ರಹ್ಮಣ್ಯ ಕಬಕ ರಸ್ತೆ ರೈಲು ವಿಸ್ತಾರಣೆ ಬೇಡಿಕೆಗೆ ಈಡೇರಿದ್ದು ಚಾಲನೆ ಸಿಗಲಿದೆ. ಇದರ ಚಾಲನೆಯನ್ನು ರಾಜ್ಯ ರೈಲ್ವೆ ಸಚಿವರಾದ ವಿ ಸೋಮಣ್ಣ ನೆರವೇರಿಸಲಿದ್ದಾರೆ. ಈ ರೈಲು ನಿತ್ಯ ಮೂರು ಟ್ರಿಪ್ ಮಾಡಲಿದ್ದು. ಈ ಸೇವೆ ಮಂಗಳೂರು ಸುಬ್ರಹ್ಮಣ್ಯ ಯಾತ್ರಿಗಳಿಗೆ ಅನುಕೂಲ ಆಗಲಿದೆ ಎಂದರು. ಮಂಗಳೂರು ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಪೋರ್ಟ್ ಕನೆಕ್ಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಇದೀಗ ಮುಗ್ರೋಡಿ ಗುತ್ತಿಗೆ ಕಂಪನಿಗೆ ಇದರ ಕಾಮಗಾರಿ ಸಿಕ್ಕಿದೆ. ಕೇಂದ್ರ ಸಚಿವರು ಇದಕ್ಕೆ 26 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು. ಶೂನ್ಯ ವೇಳೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂ ಒತ್ತವರಿ ಬೇಡಿಕೆ ಇರಿಸಲಾಗಿದ್ದು, ಇದರ ಬಗ್ಗೆ ಚರ್ಚೆಗಳಾಗಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಗಳು ಆಗಲಿವೆ ಎಂದರು.

ಶಿರಾಡಿ ಘಾಟಿಯಲ್ಲಿ ಈಗಿರುವ ರಸ್ತೆಗೆ ಹೆಚ್ಚುವರಿಯಾಗಿ ದ್ವಿಪಥ ನಿರ್ಮಾಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ವಿನಂತಿಸಲಾಗಿದೆ. ಈಗಾಗಲೇ ಯೋಜನೆ ಡಿಪಿಆರ್ ಸಿದ್ಧವಾಗುತ್ತಿದೆ. ರಸ್ತೆ ಮತ್ತು ರೈಲು ಮಾರ್ಗ ಸಮಾನಾಂತರವಾಗಿ ನಿರ್ಮಾಣವಾದರೆ, ಪರಿಸರ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿದೆ. ಜೊತೆಗೆ, ಅರಣ್ಯ ಇಲಾಖೆ ಅನುಮತಿ ಸೇರಿದಂತೆ ಇತರ ಪ್ರಕ್ರಿಯೆಗಳು ಶೀಘ್ರ ನಡೆಯುತ್ತವೆ. ಈ ವಿಷಯವನ್ನು ಹೆದ್ದಾರಿ ಸಚಿವ ಮತ್ತು ರೈಲ್ವೆ ಸಚಿವರ ಗಮನಕ್ಕೆ ತರಲಾಗಿದೆ ಎಂದರು.