Connect with us

DAKSHINA KANNADA

mangaluru : ಹಿರಿಯ ಸಾಹಿತಿ ಕರಾವಳಿ ಲೇಖಕಿ ವಾಚಕೀಯರ ಸಂಘದ ಮಾಜಿ ಅಧ್ಯಕ್ಷೆ ಮನೋರಮ ಭಟ್ ಇನ್ನಿಲ್ಲ

ಮಂಗಳೂರು :  ಹಿರಿಯ ಸಾಹಿತಿ, ಹೋರಾಟಗಾರ್ತಿ, ಕರಾವಳಿ ಲೇಖಕಿ ವಾಚಕೀಯರ ಸಂಘದ ಮಾಜಿ ಅಧ್ಯಕ್ಷೆ ಮನೋರಮ ಭಟ್ ನಿಧನರಾಗಿದ್ದಾರೆ. 93 ವರ್ಷದ ಮನೋರಮಾ ಭಟ್ ಅವರು ಮಂಗಳೂರಿನ ಹಿರಿಯ ನ್ಯಾಯವಾದಿ, ಯಕ್ಷಗಾನ ಕಲಾವಿದ ದಿ| ಮುಳಿಯ ಮಹಾಬಲ ಭಟ್ ಅವರ ಪತ್ನಿಯಾಗಿದ್ದರು.

93 ವರ್ಷದ ಅವರು ವಯೋಸಹಜ ಕಾರಣದಿಂದ ಭಾನುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.  ಹೋರಾಟದ ಮನೋಭಾವ , ಸಾಹಿತಿಯಾಗಿದ್ದ ಮನೋರಮಾ ಭಟ್ ಅವರು ಸಣ್ಣಕತೆಗಾರ್ಥಿಯಾಗಿ ಸಾಹಿತ್ಯಕ್ಷೇತ್ರ ಪ್ರವೇಶಿಸಿದವರು. ನಿರ್ಧಾರ, ಹೊಸಹಾದಿ, ನೀನು ಮತ್ತು ನಾನು, ಋಣಾನುಬಂಧ, ಚಂದ್ರಮತಿಯ ಕನಸು, ಬಲಿ ಸೇರಿದಂತೆ ಹಲವು ಕೃತಿ ಹೊರತಂದಿದ್ದಾರೆ. ಹೆಂಗಸರು ವಿಧವೆಯರಾದಾಗ ಮಾಂಗಲ್ಯವನ್ನು ತೆಗೆಯಬೇಕೆಂಬ ನಂಬಿಕೆಯನ್ನು ಎದುರಿಸಿ ಹೋರಾಡಿದವರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದು, ಬಳಿಕ ಅಧ್ಯಕ್ಷರೂ ಆಗಿದ್ದರು.

ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಗಳಗಿಂತಲೂ ಹೆಚ್ಚುಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದವರು. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಉರ್ವಾಸ್ಟೋರ್‌ನಲ್ಲಿದ್ದ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ವೃದ್ಧಾಪ್ಯದ ಕಾರಣ ಕೆಲವು ವರ್ಷಗಳಿಂದ ನಗರದ ಹೊರವಲಯದ ಆಶ್ರಮದಲ್ಲಿದ್ದರು. ಅವರು ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪುರಸ್ಕಾರ ಗಳಿಸಿದ್ದಾರೆ. ಇಬ್ಬರು ಪುತ್ರರು, ಅಪಾರ ಬಂಧು, ಬಾಂಧವರನ್ನು ಅಗಲಿದ್ದಾರೆ.  ಮನೋರಮಾ ಭಟ್ ಅವರ ನಿಧನಕ್ಕೆ ಅನೇಕ ಸಾಹಿತಿಗಳು, ಜನಪ್ತಿನಿಧಿಗಳು, ಸಾಹಿತ್ಯಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *