LATEST NEWS
ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ದಾಳಿ 400 ಲೀ ಹುಳಿ ರಸ ನಾಶ

ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ದಾಳಿ 400 ಲೀ ಹುಳಿ ರಸ ನಾಶ
ಮಂಗಳೂರು ಎಪ್ರಿಲ್ 17: ನದಿ ತೀರದಲ್ಲಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ ವಲಯದ ಅಬಕಾರಿ ಅಧಿಕಾರಿಗಳು 400 ಲೀಟರ್ ಹುಳಿ ರಸವನ್ನು ವಶಪಡಿಸಿಕೊಂಡಿದ್ದಾರೆ.
ಇನೊಲಿ ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಪಜಿಲ ಎಂಬಲ್ಲಿನ ಹೊಳೆ ಬದಿಯಲ್ಲಿ ಎರಡು ಬ್ಯಾರೇಲ್‌ಗಳಲ್ಲಿ ಭಟ್ಟಿ ಸಾರಾಯಿ ತಯಾರಿಕೆ ಗಾಗಿ ದಾಸ್ತಾನಿಸಿರುವ 400 ಲೀಟರ್ ಗಳಷ್ಟು ಹುಳಿ ರಸವನ್ನು ಪತ್ತೆಹಚ್ಚಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ವಲಯದ ಅಬಕಾರಿ ನಿರೀಕ್ಷಕರು ರತ್ನಾಕರ್ ರೈ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
