DAKSHINA KANNADA
ಮಂಗಳೂರು ಪೊಲೀಸ್ ಕಾರ್ಯಾಚರಣೆ ಆರಂಭ, ನಿಮ್ಮ ವಾಹನಗಳಲ್ಲಿ ಅನಧಿಕೃತ ಕಣ್ಣುಕುಕ್ಕುವ LED ಲೈಟ್ ಗಳಿದ್ದರೆ ಕಿತ್ತಾಕಿ..!

ಮಂಗಳೂರು : ವಾಹನ ಚಲಾಯಿಸುವಾಗ ಎದುರು ಬದಿಯಿಂದ ಬರುವ ವಾಹನ ಸವಾರರಿಗೆ ತೊಂದರೆಯಾಗುವಂಥ ತೀಕ್ಷ್ಣ ಬೆಳಕಿನ ಎಲ್ಇಡಿ(LED) ಲೈಟ್ಗಳ ವಿರುದ್ದ ಪೊಲೀಸ್ ಕಾರ್ಯಾಚರಣೆ ರಾಜ್ಯಾದ್ಯಾಂತ ಆರಂಭವಾಗಿದೆ .
ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿ ಲೈಟ್ ಅಳವಡಿಸುವ ವಾಹನ ಮಾಲೀಕರ ವಿರುದ್ಧ ಕರ್ನಾಟಕ ಸಂಚಾರ ಪೊಲೀಸರು ಕಾರ್ಯಯಾಚರಣೆ ಶುರು ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾರ್ಯಾಚರಣೆ ಆರಂಭವಾಗಿದ್ದು ಈಗಾಗಲೇ 92 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕರ್ಕಶ ಹಾರ್ನ್, ಟಿಂಟ್ ಗ್ಲಾಸ್ ಹಾಕಿ ಓಡಾಟ ಮಾಡುವವರ ಮೇಲೂ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಮಗಳೂರಿನಲ್ಲೂ ಇದಕ್ಕಾಗಿ ಪೊಲೀಸರ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದ್ದು ಸಿಟಿ ಬಸ್, ಇತರ ಖಾಸಾಗಿ ವಾಹನಗಳ ಮೇಲೆ ಅಳವಡಿಸಿದ LED ಲೈಟ್, ಟಿಂಟ್ ಗ್ಲಾಸ್, ಕರ್ಕಶ ಹಾರ್ನ್ ಗಳ ಅಳವಡಿಸಿದ್ದನ್ನು ತೆರವು ಮಾಡಿ ಪ್ರಕರಣ ದಾಖಲು ಮಾಡಲು ಕ್ರಮ ವನ್ನು ಸಂಚಾರಿ ಎಸಿಪಿ ನಜ್ಮಾ ಫಾರೂಕಿ ನೇತೃತ್ವದಲ್ಲಿ ಆರಂಭವಾಗಿದೆ.
ಈ ಬಗ್ಗೆ ಮಾಹಿ ನೀಡಿರುವ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಎಡಿಜಿಪಿ ಅಲೋಕ್ ಕುಮಾರ್ ಈವರೆಗೆ ರಾಜ್ಯದಲ್ಲಿ 1518 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
