LATEST NEWS
ಮಂಗಳೂರು :ಕಾಲೇಜ್ ಸೇರಿದ ಕೆಲವೇ ದಿನದಲ್ಲಿ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ..!

ಮಂಗಳೂರು : ಕಾಲೇಜ್ ಸೇರಿದ ಕೆಲವೇ ದಿನದಲ್ಲಿ ನರ್ಸಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೇರಳ ಮೂಲದ ಸಚಿನ್ ಸಾಜು(19) ಜೀವಾಂತ್ಯ ಮಾಡಿದ ವಿದ್ಯಾರ್ಥಿಯಾಗಿದ್ದಾನೆ. ಮಂಗಳೂರು ನಗರದ ಹೊರವಲಯದ ವಳಚ್ಚಿಲ್‌ನ ಖಾಸಾಗಿ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸಕ್ಕಾಗಿ ದಾಖಲಾತಿ ಪಡೆದುಕೊಂಡಿದ್ದ ಸಚಿನ್ ಅಪರಾಹ್ನ ಕಾಲೇಜ್ ಹಾಸ್ಟೆಲಿನ ರೂಂನಲ್ಲಿ ನೇಣಿಗೆ ಶರಣಾಗಿದ್ದಾನೆ. 1ನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಸಾಜು ಕೆಲ ದಿನಗಳ ಹಿಂದೆ ಅಂದ್ರೆ ನವೆಂಬರ್ 30 ರಂದು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಆರೋಗ್ಯ/ಖಿನ್ನತೆಯ ಸಮಸ್ಯೆಗಳಿಂದಾಗಿ ಕಳೆದ ಎರಡು ದಿನಗಳಿಂದ ತರಗತಿಗಳಿಗೆ ಹಾಜರಾಗುತ್ತಿರಲಿಲ್ಲ. ರೂಮ್ ಮೇಟ್‌ಗಳು ಕೋಣೆಯಲ್ಲಿ ಇಲ್ಲದಿದ್ದಾಗ, ಅವರು ಬೆಟ್ ಶೀಟ್ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
