DAKSHINA KANNADA
ಮಂಗಳೂರು : ಈಜುಕೊಳ ಉದ್ಘಾಟನೆಗೆ ಅಹ್ವಾನಿಸದ ಅಧಿಕಾರಿಗಳನ್ನು ಸಚಿವರ ಮುಂದೆ ಜಾಡಿಸಿದ ಸಂಸದ ಕಟೀಲ್

ಮಂಗಳೂರು : ಮಂಗಳೂರಿನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಮುರಿದು ತನನ್ನು ಹೊರಗಿಟ್ಟ ಅಧಿಕಾರಿಗಳನ್ನು ಲೋಕಾಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ತರಾಟೆಗೆ ತಗೊಂಡ ಪ್ರಸಂಗ ನಗರದಲ್ಲಿ ಶುಕ್ರವಾರ ನಡೆದಿದೆ,
ಮಂಗಳೂರು ನಗರದ ಎಮ್ಮೆಕೆರೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಂತರಾಷ್ಟ್ರೀಯ ಮಟ್ಟದ ಈಜುಕೊಳ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ನೇರವೇರಿಸಿದರು.

ರಾಜ್ಯ ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರುಗಳ ಸಹಿತ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು, ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಕಟೀಲ್ ಸ್ಥಳಿಯ ಸಂಸದನಾಗಿ ಈ ಸರ್ಕಾರಿ ಕಾರ್ಯಕ್ರಮಕ್ಕೆ ತಮ್ಮನ್ನು ಅಹ್ವಾನಿಸದಕ್ಕೆ ವೇದಿಕೆಯಲ್ಲೇ ಅಧಿಕಾರಿಗಳು ಮತ್ತು ಸಚಿವರು ತರಾಟೆಗೆ ತಗೊಂಡರು. ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಸರ್ಕಾರದ್ದು, ಕೇಂದ್ರ ಸರ್ಕಾರ ಪ್ರಯೋಜಿತ ಎಲ್ಲಾ ಕಾರ್ಯಕ್ರಮಗಳಿಗೆ ಸಂಸದರನ್ನು ಅಹ್ವಾನಿಸುವುದು ಪ್ರೊಟೊಕಾಲ್, ಇದನ್ನೇ ಅಧಿಕಾರಿಗಳು ಮುರಿದಿದ್ದಾರೆ, ಮುಂದೆ ಈ ರೀತಿ ಆಗದಿರುವಂತೆ ಕ್ರಮ ವಹಿಸಿ ಎಂದು ಸಚಿವರಿಗೆ ಕಿವಿಮಾತು ಹೇಳಿದರು..