LATEST NEWS
ಮಂಗಳೂರು: ಅದ್ಯಪಾಡಿನಲ್ಲಿ ಮನೆ ನಾಯಿ ಮೇಲೆ ಚಿರತೆ ದಾಳಿ..!

ಮಂಗಳೂರು : ಮಂಗಳೂರು ನಗರದ ಬಜ್ಪೆ ಅದ್ಯಪಾಡಿನಲ್ಲಿ ಮತ್ತೆ ಚಿರತೆ ಕಾಟ ಕಾಡಲಾರಂಭಿಸಿದ್ದು, ಕಾಡು ಪ್ರದೇಶವೇ ಹೆಚ್ಚಾಗಿರುವ ಇಲ್ಲಿ ಜನ ಭಯಭೀತರಾಗಿದ್ದಾರೆ.
ಇಲ್ಲಿನ ಗುಂಡಾವು ಪರಿಸರಲ್ಲಿ ಚಿರತೆ ದಾಳಿ ಮಾಡಲಾರಂಭಿಸಿದ್ದುಬಬಿತಾ ಪಿರೇರಾ ಎಂಬವರ ಮನೆ ನಾಯಿ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದಲ್ಲೇ ಇರುವ ಪ್ರದೇಶದಲ್ಲಿ ನಿಲ್ಲಾಣ ಸಿಬಂದಿ ಚಿರತೆ ಓಡಾಡವನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಚಿರತೆ ದಾಳಿಯಿಂದ ದನ, ನಾಯಿಗಳ ರಕ್ಷಣೆಯೇ ಗ್ರಾಮಸ್ಥರಿಗೆ ದೊಡ್ಡ ಸವಾಲಿದೆ. ಪುಟ್ಟ ಶಾಲಾ ಮಕ್ಕಳನ್ನು ಒಬ್ಬಂಟಿಯಾಗಿ ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ ಸಂಜೆ ಹೊತ್ತು ಕೆಲಸ ಮುಗಿಸಿ ಬರುವ ಮಹಿಳೆಯರು ಈ ಚಿರತೆ ಕಾಟದಿಂದ ಭಯಭೀತರಾಗಿದ್ದು ತುರ್ತು ಕಾರ್ಯಾಚರಣೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
