DAKSHINA KANNADA
ಮಂಗಳೂರು : ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಕಾನೂನು ಸಲಹೆಗಾರರು ಬೇಕಾಗಿದ್ದಾರೆ, ವೇತನ ರೂ.70,000…
ಮಂಗಳೂರು , ಡಿ.05 : ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಕಾನೂನು ಸಲಹೆಗಾರರು(Legal advisors) ಬೇಕಾಗಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಗೆ ಸಂಬಂಧಿಸಿದ ಭೂ ಕಂದಾಯ, ಭೂ ಮಂಜೂರಾತಿ ನಿಯಮ, ಭೂ ಸುಧಾರಣಾ, ಭೂ ಸ್ವಾಧೀನ ಕಾಯ್ದೆ, ನಿಯಮ ಇನ್ನಿತರ ಕಾಯ್ದೆ ನಿಯಮಗಳ ಪ್ರಕರಣಗಳಿಗೆ ಹಾಗೂ ಯಾವುದೇ ನ್ಯಾಯಾಲಯ ವ್ಯಾಜ್ಯಗಳ ಬಗ್ಗೆ ಕಾನೂನು ಸಲಹೆ ನೀಡಲು ಸೃಷ್ಟಿಸಲಾಗಿರುವ ಕಾನೂನು ಸಲಹೆಗಾರರ ಹುದ್ದೆಗೆ ನಿವೃತ್ತ ನ್ಯಾಯಾಧೀಶರು, ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ರೂ.70,000 ವೇತನ ಮತ್ತು ನಿವೃತ್ತ ಕಂದಾಯ ಇಲಾಖೆಯ ನೌಕರರಿಗೆ (ನಿವೃತ್ತ ತಹಶೀಲ್ದಾರ್, ಉಪತಹಶೀಲ್ದಾರ್) ರೂ 40,000 ಮಾಸಿಕ ವೇತನ ನಿಗಧಿಗೊಳಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಬಯೋಡೇಟಾ ಮತ್ತು ದಾಖಲೆಗಳೊಂದಿಗೆ ಮಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸೆಂಬರ್ 20 ರೊಳಗೆ ಅರ್ಜಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿ, ಬಂದರ್ ರಸ್ತೆ, ಮಂಗಳೂರು ಇಲ್ಲಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.