DAKSHINA KANNADA
ಮಂಗಳೂರು : ಹಳೆಯಂಗಡಿ ಮಹಿಳಾ ಮಂಡಲಕ್ಕೆ ಒಲಿದ “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿ..!

ಮುಲ್ಕಿ : ಕರ್ನಾಟಕ ರಾಜ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿ ಹಳೆಯಂಗಡಿ ಮಹಿಳಾ ಮಂಡಲಕ್ಕೆ ಒಲಿದಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಬೆಂಗಳೂರಿನ ಜವಾಹರ ಬಾಲಭವನ, ಕಬ್ಬನ್ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಹಳೆಯಂಗಡಿ ಮಹಿಳಾ ಮಂಡಲದ ಅಧ್ಯಕ್ಷೆ ರೇಷ್ಮಾ ಅವರು “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿಯನ್ನು ಪಡೆದುಕೊಂಡರು . ದರ್ಭದಲ್ಲಿ ಹಳೆಯಂಗಡಿ ಮಹಿಳಾ ಮಂಡಲದ ಕಾರ್ಯದರ್ಶಿ ಪ್ರೇಮಲತಾ ಯೋಗೀಶ್, ಕೋಶಾಧಿಕಾರಿ ರಾಜೇಶ್ವರಿ ರಾಮನಗರ, ಕ್ರೀಡಾ ಕಾರ್ಯದರ್ಶಿ ನಿರ್ಮಲಾ ಸದಸ್ಯರಾದ ರತ್ನಾ, ಗೀತಾ ಸುಕುಮಾರ್, ನಫೀಸಾ, ಪ್ರಮೀಳಾ ಸೇರಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.