LATEST NEWS
ಹಾಡುಹಗಲೇ ನಾಗುರಿ ಮೆಡಿಕಲ್ ಶಾಪ್ ನಲ್ಲಿ ಯುವತಿಗೆ ಚೂರಿ ತೋರಿಸಿ ಹಣ ಲೂಟಿ – ಆರೋಪಿ ಅರೆಸ್ಟ್
ಮಂಗಳೂರು ಜನವರಿ 03: ನಾಗುರಿ ಮೆಡಿಕಲ್ ಶಾಪ್ ನಲ್ಲಿ ಮಹಿಳೆ ಉದ್ಯೋಗಿಗೆ ಚೂರಿ ತೋರಿಸಿ ಹಣ ಸುಲಿಗೆ ಮಾಡಿದ್ದ ಆರೋಪಿಯನ್ನು ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 17,500 ನಗದು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬೊಂದೇಲ್ ಚರ್ಚ್ ಹಿಂಭಾಗದ ಪಟ್ರಕೋಡಿಯ ಸಿರಿಲ್ ಕಂಪೌಂಡ್ ನಿವಾಸಿ ಸುನೀಲ್ ಎಂದು ಗುರುತಿಸಲಾಗಿದೆ. ಆರೋಪಿಯು 2024ರ ಡಿ 28ರಂದು ಮಧ್ಯಾಹ್ನ ನಾಗುರಿಯ ಔಷಧ ಮಳಿಗೆಯ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಡ್ರಾಯರ್‌ನಲ್ಲಿದ್ದ ₹19,300 ನಗದನ್ನು ಸುಲಿಗೆ ಮಾಡಿದ್ದ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಯು ಸುಲಿಗೆ ಮಾಡಿದ್ದ ₹17,500 ನಗದು ಸೇರಿದಂತೆ ಒಟ್ಟು ₹ 1.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ಆತನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.