Connect with us

    DAKSHINA KANNADA

    ಮಂಗಳೂರು; ಕರಸೇವಕರ ಬಂಧನಕ್ಕೆ ಖಂಡನೆ,ರಾಜ್ಯ ಸರ್ಕಾರದ ಕ್ರಮಕ್ಕೆ ರೊಚ್ಚಿಗೆದ್ದು ಬೀದಿಗಿಳಿದ ಕಮಲ ಪಡೆ ..!

    ಮಂಗಳೂರು : ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿರುವ ರಾಜ್ಯ ಸರ್ಕಾರ ವಿರುದ್ದ ಕಮಲ ಪಡೆ ರೊಚ್ಚಿಗೆದ್ದಿದ್ದು, ಮಂಗಳೂರಿನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾಡಿದ ನಗರ ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಕಾಂಗ್ರೆಸ್ ನವರು 39 ವರ್ಷಗಳ ದ್ವೇಷದ ಭಾವನೆ ವಾಂತಿ ಮಾಡುತ್ತಿದ್ದಾರೆ. ಸಮಾಜದಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ದೇಶವೇ ಗರ್ವ ಪಡುವ ಈ ಶುಭ ಸಂದರ್ಭದಲ್ಲಿ ದ್ವೇಷದ ಭಾವನೆಯ ವಿಷ ಬೀಜವನ್ನ ಬಿತ್ತುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಿ ಎಫ್ ಐ ಕಾರ್ಯರ್ತರನ್ನು ಸಿದ್ದರಾಮಯ್ಯ ಅವರೇ ದೇಶದ್ರೋಹಿಗಳಲ್ಲ ಎಂದು ತೀರ್ಮಾನಿಸಿ ಬಿಡಿಸಿದ್ದಾರೆ. ಪಿಎಫ್ ಐ ನವರನ್ನ ರಿಲೀಸ್ ಮಾಡಬೇಡಿ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ರೂ ಸಿದ್ದರಾಮಯ್ಯ ರಿಲೀಸ್ ಮಾಡ್ತಾರೆ. ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗುತ್ತೆ, ಆಗ ಅವ ಭಯೋತ್ಪಾದಕ ಅಂತ ಹೇಳಿದಾಗ ಡಿಕೆ ಶಿವಕುಮಾರ್ ಅವ ಅಮಾಯಕ ಎಂದು ಹೇಳ್ತಾರೆ. ಎಲ್ಲವೂ ರಾಜಕೀಯ ಪ್ರೇರಿತ ಮಾತುಗಳಾಗಿದ್ದು ಅಲ್ಪಸಂಖ್ಯಾತರ ವೋಟ್ ಸಿಗಲಿ ಎಂದು ಈ ರೀತಿ ಮಾಡ್ತಾರೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ತಾಕತ್ತಿದ್ದರೆ ರಾಜ್ಯದ ಎಲ್ಲ ಕರ ಸೇವಕರ ಕೇಸನ್ನು ರೀ ಓಪನ್ ಮಾಡಲಿ. ಹಿಂದೂಗಳನ್ನು ತುಚ್ಚವಾಗಿ ಕಾಣುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನದ ಪರ ಘೋಷಣೆ ಮಾಡುವವರನ್ನು ಕಾಪಾಡುತ್ತಾರೆ. ಅಯೋಧ್ಯೆ ವಿಚಾರವಾಗಿ ಕಾಂಗ್ರೆಸ್ ನವರು ರಾಜ್ಯ ಸರಕಾರಗಳನ್ನೆ ಬರ್ಖಾಸ್ತು ಮಾಡಿದ್ದರು. ಹಿಂದೂಗಳು ರೊಚ್ಚಿಗೆದ್ದರೆ ಒಂದೇ ವಾರದಲ್ಲಿ ಸರಕಾರ ಬೀಳುತ್ತದೆ. ಸರಕಾರ ಹಿಂದೂಗಳ ನಂಬಿಕೆ‌ ಹೊಸಕಿ ಹಾಕುವ, ಕೆಣಕುವ ಪ್ರಯತ್ನ ಕೈಬಿಡಬೇಕು ಎಂದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕಸ್ತೂರಿ ಪಂಜ, ಹರಿಕೃಷ್ಣ ಬಂಟ್ವಾಳ, ಜಗದೀಶ ಶೇಣವ, ಕ್ಯಾಪ್ಟನ್ ಬೃಜೇಶ್ ಚೌಟ ಮೊದಲಾದವರು ಪಾಲ್ಗೊಂಡಿದ್ದರು.

     

    Share Information
    Advertisement
    Click to comment

    Leave a Reply

    Your email address will not be published. Required fields are marked *