DAKSHINA KANNADA
ಮಂಗಳೂರು ಚಲೋ ಜನ ಸುರಕ್ಷಾಯಾತ್ರೆಯ ಗೋಹತ್ಯೆ ಬಿಂಬಿಸುವ ಟ್ಯಾಬ್ಲೋ ಪೊಲೀಸ್ ವಶ
ಮಂಗಳೂರು ಚಲೋ ಜನ ಸುರಕ್ಷಾಯಾತ್ರೆಯ ಗೋಹತ್ಯೆ ಬಿಂಬಿಸುವ ಟ್ಯಾಬ್ಲೋ ಪೊಲೀಸ್ ವಶ
ಸುಳ್ಯ ಮಾರ್ಚ್4: ಬಿಜೆಪಿಯ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆಯಲ್ಲಿ ಬಳಸಿದ್ದ ಗೋಹತ್ಯೆ ಬಿಂಬಿಸುವ ಟ್ಯಾಬ್ಲೋ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಕರಾವಳಿಯಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಜನ ಸುರಕ್ಷಾ ಯಾತ್ರೆ ಇಂದು ಸುಳ್ಯ ತಲುಪಿದೆ. ಈ ಜನಸುರಕ್ಷಾ ಯಾತ್ರೆ ಸಂಬಂಧ ನಿರ್ಮಿಸಲಾಗಿದ್ದ ಗೋಹತ್ಯೆ ಬಿಂಬಿಸುವ ಟ್ಯಾಬ್ಲೋ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಈ ಟ್ಯಾಬ್ಲೋದಲ್ಲಿ ಗೋವನ್ನು ಹತ್ಯೆ ಮಾಡುವವರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ತಬ್ಧ ಚಿತ್ರವನ್ನೂ ಅಳವಡಿಸಿ ಗೋ ಹತ್ಯೆಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿತ್ತು.
ಟ್ಯಾಬ್ಲೋವನ್ನು ವಶಕ್ಕೆ ಪಡೆದ ಪೋಲೀಸ್ ಇಲಾಖೆಯ ಕ್ರಮಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದ ಸಂಸದ ನಳಿನ್ ಕುಮಾರ್ ಕಟೀಲ್ ಯಾತ್ರೆಗೆ ತಡೆಯೊಡ್ಡಲು ರಾಜ್ಯ. ಸರಕಾರ ಈ ಕೃತ್ಯ ನಡೆಸುತ್ತಿದ್ದು ಇಂದು ಸಂಜೆಯೊಳಗೆ ಟ್ಯಾಬ್ಲೋ ಬಿಡದೇ ಇದ್ದಲ್ಲಿ ಸರಕಾರಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.