DAKSHINA KANNADA
ಮಂಗಳೂರು ಚಲೋ ಬೈಕ್ Rally ತಡೆಗೆ ಸರಕಾರದಿಂದ ಪೋಲೀಸ್ ಬಳಕೆ.
ಸುಳ್ಯ,ಸೆಪ್ಟಂಬರ್ 3: ಸೆಪ್ಟಂಬರ್ 7 ರಂದು ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ನಡೆಸಲು ಉದ್ಧೇಶಿಸಿರುವ ಬೈಕ್ Rally ಯನ್ನು ಪೋಲೀಸ್ ಮೂಲಕ ನಿಯಂತ್ರಿಸುವ ಪ್ರಯತ್ನಗಳು ಇದೀಗ ಸರಕಾರದ ವತಿಯಿಂದ ನಡೆಯುತ್ತಿದೆ.
ಬೈಕ್ Rally ಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾತ್ರಿ ವೇಳೆಯಲ್ಲಿ ತಂಗಲು ಜಿಲ್ಲೆಯ ವಿವಿಧ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆಯನ್ನು ಬಿಜೆಪಿ ಪಕ್ಷದ ವತಿಯಿಂದ ಮಾಡಲಾಗಿತ್ತು.
ಆದರೆ ಇದೀಗ ಪೋಲೀಸ್ ಇಲಾಖೆಯು ಭದ್ರತೆಯ ಹೆಸರಿನಲ್ಲಿ ಕಲ್ಯಾಣ ಮಂಟಪಗಳಲ್ಲಿ ಯುವಮೋರ್ಚಾ ಕಾರ್ಯಕರ್ತರಿಗೆ ತಂಗಲು ಅವಕಾಶ ಕಲ್ಪಿಸಬಾರದು ಎನ್ನುವ ಎಚ್ಚರಿಕೆಯ ನೋಟೀಸನ್ನು ಜಿಲ್ಲೆಯ ಬಹುತೇಕ ಕಲ್ಯಾಣ ಮಂಟಪಗಳ ವ್ಯವಸ್ಥಾಪಕರಿಗೆ ನೀಡಿದ್ದಾರೆ.
ನಿನ್ನೆಯಷ್ಟೇ ಆಹಾರ ಸಚಿವ ಯು.ಟಿ.ಖಾದರ್ ಬಿಜೆಪಿಯ ಯುವಮೋರ್ಚಾದ ಬೈಕ್ rally ಯನ್ನು ನಿಲ್ಲಿಸಬೇಕೆಂದು ಹೇಳಿಕೆ ನೀಡಿದ್ದರು, ಇದರ ಜೊತೆಯಲ್ಲೇ ಎಸ್.ಡಿ.ಪಿ.ಐ ಪಕ್ಷ ಹಾಗೂ ಪಿಎಫ್ಐ ಸಂಘಟನೆ ಬಿಜೆಪಿಯ rally ಯನ್ನು ನಿಶೇಧಿಸುವಂತೆ ಒತ್ತಾಯಿಸಿತ್ತು. ಈ ನಡುವೆ ಪೋಲೀಸ್ ಇಲಾಖೆಯ ಈ ಕ್ರಮದ ಬಗ್ಗೆ ಬಿಜೆಪಿ ಕಿಡಿಕಾರಿದ್ದು, ಯಾವುದೇ ಕಾರಣಕ್ಕೂ rally ಕೈ ಬಿಡುವುದಿಲ್ಲ ಎನ್ನುವ ಪಟ್ಟನ್ನು ಹಿಡಿದಿದೆ.ಬಿಜೆಪಿ ಯುವಮೋರ್ಚಾ ದೇಶದಲ್ಲಿ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬೈಕ್ ರಾಲಿಯನ್ನು ಆಯೋಜಿಸಿದೆ.