LATEST NEWS
ಮಂಗಳೂರು :ಸಾಫ್ಟ್ ವೇರ್ ಕಂಪೆನಿ ಕ್ಯಾಬ್ ಚಾಲಕನ ಕೊಲೆ ಯತ್ನ, ನಾಲ್ವರ ಬಂಧನ
ಮಂಗಳೂರು : ಮಂಗಳೂರು ನಗರದ ಮೇರಿಹಿಲ್ ಸಾಫ್ಟ್ ವೇರ್ ಕಂಪೆನಿಯ ಕ್ಯಾಬ್ ಚಾಲಕ ಸಂದೀಪ್ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ತೇಜಸ್ ಶೆಟ್ಟಿ, ಭವಿತ್ ಶೆಟ್ಟಿ, ಪ್ರೀತಂ, ದೀಕ್ಷಿತ್ ದೇವಾಡಿಗ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆಗೆ ಸಂಬಂಧಿಸಿ ಇನ್ನೂ ಇಬ್ಬರ ಬಂಧನ ಬಾಕಿಯಿದ್ದು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆರೋಪಿ ತೇಜಸ್ ಶೆಟ್ಟಿ ಕೂಡಾ ಈ ಸಂಸ್ಥೆಯಲ್ಲಿ ಚಾಲಕನಾಗಿದ್ದು, ಈತನಿಗೂ ಕೊಲೆಯತ್ನಕ್ಕೊಳಗಾದ ಸಂದೀಪ್‌ಗೂ ಹಳೇ ವೈಷಮ್ಯವಿತ್ತು ಎನ್ನಲಾಗಿದೆ. ಬುಧವಾರ ರಾತ್ರಿ ತೇಜಸ್ ಶೆಟ್ಟಿ ತನ್ನ ಪಾಳಿ ಮುಗಿದ ಬಳಿಕ ಇತರರ ಜೊತೆಗೂಡಿ ಸಂದೀಪ್ ಮೇಲೆ ದಾಳಿ ಮಾಡಿ ಕೊಲೆ ಯತ್ನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಂದೀಪ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ. ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.