BANTWAL
ಮಂಗಳೂರು : 13 ಜನರ ಬಲಿ ಪಡೆದ ಅರ್ಕುಳ ದ್ವಾರ ಜಂಕ್ಷನ್ ಆಗುತ್ತಿದೆ ಡೆತ್ ಸ್ಪಾಟ್..!

ಮಂಗಳೂರು : ಮಂಗಳೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ಹೆದ್ದಾರಿ ಸಾಗುವ ಫರಂಗಿಪೇಟೆ ಸಮೀಪದ ಅರ್ಕುಳ ದ್ವಾರ ಜಂಕ್ಷನ್ ಅಪಾಯಕಾರಿಯಾಗಿದೆ.
ರಜಾ ದಿನವಾದ ಭಾನುವಾರ ಬೆಳಿ್ಗ್ಗೆ ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬೈಕ್ ಸವಾರನೊಬ್ಬನನ್ನು ಬಲಿ ಪಡೆದಿದೆ. 33 ವರ್ಷದ ಸ್ಥಳೀಯ ಮೇರುಮಜಲು ನಿವಾಸಿ ಚರಣ್ ಬಸ್ ಅಪಘಾತದಲ್ಲಿ ಜೀವಕಳಕೊಂಡ ವ್ಯಕ್ತಿಯಾಗಿದ್ದಾರೆ. ಈ ಅಪಘಾತದಿಂದ ರೋಸಿ ಹೋದ ಜನ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಡ್ಡ ಇಟ್ಟು ಡಿಡೀರ್ ರಸ್ತೆ ತಡೆ ಮಾಡಿ ಅವೈಜ್ಞಾನಿಕ ಹೆದ್ದಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಜನ ಆಕ್ರೋಶದಿಂದ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಅಡಚಣೆ ಉಂಟಾಯಿತು. ಸ್ಥಳಕ್ಕೆ ಧಾವಿಸಿ ಬಂಧ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಆಕ್ರೋಶಿತ ಜನರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಡೆತ್ ಸ್ಪಾಟ್ ಆಗುತ್ತಿದೆ ಅರ್ಕುಳ ದ್ವಾರ ಜಂಕ್ಷನ್:
ಈ ಅರ್ಕುಳ ದ್ವಾರ ಜಂಕ್ಷನ್ ಒಳ ರಸ್ತೆ ಸೇರಿ ಮೂರು ರಸ್ತೆಗಳನ್ನು ಕೂಡುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಒಳರಸ್ತೆಯಿಂದ ನೇರವಾಗಿ ಹೆದ್ದಾರಿಗೆ ಬರುವುದರಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಸ್ಥಳೀಯರ ಮಾಹಿತಿ ಪ್ರಕಾರ ಈ ಜಂಕ್ಷನ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದುವರೆಗೆ 13 ಜನ ಜೀವ ಕಳಕೊಂಡಿದ್ದಾರೆ.

ಭಾನುವಾರ ಜೀವಕಳಕೊಂಡ ಚರಣ್
ಅನೇಕರು ಗಾಯಗೊಂಡು ಜೀವ ಉಳಿಸಿಕೊಂಡಿದ್ದರೆ ಮತ್ತೆ ಕಲವರು ಶಾಶ್ವತ ಅಂಗಊನರಾಗಿದ್ದಾರೆ. ಇಲ್ಲಿ ಬ್ಯಾರಿಕೇಡ್ ಗಳನ್ನು ಇಟ್ಟು ಹೆದ್ದಾರಿಯಲ್ಲಿ ಸಾಗುವ ವಾಹನಗಳ ವೇಗ ನಿಯಂತ್ರಿಸಲು ತಾತ್ಕಾಲಿಕ ಕ್ರಮ ಕೈಗೊಂಡರೂ ದೊಡ್ಡ ವಾಹನಗಳು ಈ ಬ್ಯಾರಿಕೇಡರುಗಳನ್ನು ಹೊಡೆದು ಮುನ್ನುಗ್ಗುತ್ತಿದ್ದು ಇವರ ಧಾವಂತಕ್ಕೆ ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಟೋಲ್ ರಸ್ತೆಯಾಗಿದ್ದು ಲಕ್ಷಗಟ್ಟಲೆ ಹಣ ವಸೂಲಿ ದಿನಾ ನಡೆದ್ರೂ ಹೆದ್ದಾರಿ ನಿರ್ವಹಣೆ ಮಾಡದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಈ ಹೆದ್ದಾರಿ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಕ್ರಮಕೈಕೊಳ್ಳಬೇಕೆಂದು ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.