Connect with us

    LATEST NEWS

    ಮಂಗಳೂರು : ಹಂಪನನಕಟ್ಟೆ ಬಸ್ಸು ತಂಗುದಾಣ ತೆರವುಗೊಳಿಸಿದ ಕ್ರಮ ಖಂಡಿಸಿ ಪಾಲಿಕೆ ಎದುರು ABVP ಪ್ರತಿಭಟನೆ

    ಮಂಗಳೂರು: ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ಇದ್ದ ಬಸ್ ತಂಗುದಾಣವನ್ನು ಏಕಾಏಕಿ ತೆರವು ಮಾಡಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಮಾಡಿದ ಪಾಲಿಕೆ ಕ್ರಮ ಖಂಡಿಸಿ ABVP ಮಂಗಳೂರು ಪಾಲಿಕೆ ಎದುರು ಪ್ರತಿಭಟನೆ ನಡೆಸಿತು.

    ಮಂಗಳೂರು ಮಹಾನಗರ ಪಾಲಿಕೆಯಿಂದ  ಕಳೆದ ಮೂರು ವಾರಗಳ ಹಿಂದೆಯಿಂದ ಏಕಾಏಕಿ ತೆಗೆಯಲಾಗಿದ್ದು ಆ ಬಸ್ ನಿಲ್ದಾಣದಲ್ಲಿ ದಿನಕ್ಕೆ ಸುಮಾರು ಐನೂರಾರಿಂದ ಆರುನೂರು ಜನರು ಪ್ರಯಾಣಿಸುತ್ತಿದ್ದ ನಿಲ್ದಾಣ ಆಗಿತ್ತು. ಅಲ್ಲಿ ಮಳೆ, ಬಿಸಿಲು ಗಾಳಿಗೆ ಎಷ್ಟೋ ಜನರಿಗೆ ಸೂರಾಗಿದ್ದ ತಂಗುದಾಣವು ಅದೇ ರೀತಿ ಎಷ್ಟೋ ವಿದ್ಯಾರ್ಥಿಗಳಿಗೂ ಉಪಯುಕ್ತವಾದ ತಾಣವಾಗಿತ್ತು ಕಿರಿಯ, ಹಿರಿಯರಿಗೆ ಕುಳಿತು ಕೊಳ್ಳಲು ಕೂಡ ಅನುಕೂಲವಾಗಿರುವ ಪ್ರದೇಶ ಆಗಿತ್ತು ಅದರೆ ಅದೇ ಬಸ್ ನಿಲ್ದಾಣವನ್ನು ಇಂದು ಏಕಾಏಕಿ ತೆರವುಗೊಳಿಸಿ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆ ಉಂಟು ಮಾಡಿದೆ.
    ಈ ಸಮಸ್ಯೆಯನ್ನು ವಿರೋಧಿಸಿ ವಿದ್ಯಾರ್ಥಿ ಪರಿಷತ್ ನಿಂದ ಮನವಿ ನೀಡಿದ್ದರು ಕೂಡ ಯಾವುದೇ ಪ್ರಯೋಜನವಾಗದೆ ಇದ್ದದ್ದನ್ನು ನೋಡಿ ವಿದ್ಯಾರ್ಥಿ ಪರಿಷತ್ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತದೆ ಅಲ್ಲಿಯೂ ಕೂಡ ಯಾವುದೇ ಪ್ರತಿಕ್ರಿಯೆ ಅಧಿಕಾರಿಗಳಿಂದ ಬಂದಿರುವುದಿಲ್ಲ,ತಹಶೀಲ್ದಾರ್ ಒಂದು ವಾರದಲ್ಲಿ ಸಮಸ್ಯೆ ಸರಿಪಡಿಸಿ ಕೊಡುವ ಭರವಸೆ ನೀಡಿದ್ದರು, ಅದು ಕಳೆದು ವಾರಗಳೇ ಕಳೆಯಿತು ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು, ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ಮಾಡಿ ಪ್ರತಿಭಟನೆ ಹಂತ ಹಂತವಾಗಿ ಕಛೇರಿಯ ಪ್ರವೇಶದ್ವಾರವನ್ನು ತಡೆಯುವುದರ ಮೂಲಕ ಕಛೇರಿ ಆಯುಕ್ತರಿಗಾಗಿ ಪ್ರತಿಭಟನಾ ಸ್ಥಳದಲ್ಲಿ ಕುಳಿತು ತಮ್ಮ ಹಕ್ಕೊತ್ತಾಯವನ್ನು ಪೋಲಿಸ್ ಅಧಿಕಾರಿಗಳ ಮುಂದಿಟ್ಟಿದ್ದರು ನಂತರದಲ್ಲಿ ಪೋಲಿಸ್ ಅಧಿಕಾರಿಗಳ ಮೂಲಕ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರನ್ನು ಮನ ಒಲಿಸು ಪ್ರಯತ್ನ ಮಾಡಿದರು ಕೂಡ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಆಯುಕ್ತರ ಭೇಟಿಗೆ ಪಟ್ಟು ಹಿಡಿದರು ನಂತರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಪರಿಷತ್ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆಯ ನಡುವೆ ಮಾತಿನ ಚಕಮಕಿ ನಡೆಯಿತು.
    ತದನಂತರದಲ್ಲಿ ಮಾನ್ಯ ಆಯುಕ್ತರು ಭೇಟಿ ನೀಡಿ ಎರಡು ದಿನಗಳ ಒಳಗಾಗಿ ಪಾಲಿಕೆಯ ಮೇಲಾಧಿಕಾರಿಗಳ ಸಭೆ ಕರೆದು ಸಭೆಯಲ್ಲಿ ಎಬಿವಿಪಿಯ ಪ್ರಮುಖರಿಗೂ ಕೂಡ ಅಹ್ವಾನ ನೀಡುವುದಾಗಿ ತಿಳಿಸಿದರು. ಅಂತಿಮವಾಗಿ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.
    ಈ ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನೆಯ ಪ್ರಮುಖರಾದ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮರಾಠಿ ಮತ್ತು ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕ್ ಸುವಿತ್ ಶೆಟ್ಟಿ, ಮಂಗಳೂರು ಜಿಲ್ಲಾ ಸಹ ಸಂಚಾಲಕ್ ಪ್ರತೀಕ್ ಬಂಟ್ವಾಳ ಮತ್ತು ನಗರ ಕಾರ್ಯದರ್ಶಿ ಮೋನಿಷ್ ತೂಮಿನಾಡ್, ಮಹಾನಗರ ವಿಸ್ತರಕ್ ಶ್ರೀ ಲಕ್ಷ್ಮೀ, ಹೋರಾಟ ಪ್ರಮುಖ್ ವೈಭವ್ ಆಚಾರ್ಯ, ಸಹ ಕಾರ್ಯದರ್ಶಿ ಶಾಶಂಕ್ ಶೆಟ್ಟಿ,ಸಹ ಕಾರ್ಯದರ್ಶಿ ಅಕ್ಷತಾ, ರಂಜಾನ್,ಸಿಂಚನ್,ಹರ್ಷಿತ್, ಚಿರಾಗ್, ದರ್ಶನ್ , ಚೇತನ್, ಮಾರುತಿ
    ಹಾಗೂ ಪ್ರಮುಖರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply