LATEST NEWS
ವಿಜಯವಾಣಿ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ ಗಿರೀಶ್ ಕೆ ಎಲ್ ಹೃದಯಾಘಾತದಿಂದ ನಿಧನ
ಮಂಗಳೂರು ಫೆಬ್ರವರಿ 03: ವಿಜಯವಾಣಿ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ, ಮಂಗಳೂರು ಶಕ್ತಿನಗರ ನಿವಾಸಿ ಗಿರೀಶ್ ಕೆ.ಎಲ್(49) ಸೋಮವಾರ ಹೃದಯಾಘಾತದಿಂದ ನಿಧನರಾದರು.
ಶಕ್ತಿ, ಉಷಾಕಿರಣ, ಉದಯವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ವಿಜಯವಾಣಿ ಆರಂಭದಿಂದಲೇ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅವರ ನಿಧನಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ಎಂಡಿ ಡಾ.ಆನಂದ ಸಂಕೇಶ್ವರ ಸಂತಾಪ ವ್ಯಕ್ತಪಡಿಸಿದ್ದಾರೆ.