DAKSHINA KANNADA
ನವರಾತ್ರಿ ದಾಂಡಿಯಾ ನೃತ್ಯ ಆಯೋಜನೆಗೆ ದುರ್ಗಾವಾಹಿನಿ ವಿರೋಧ..!

ಮಂಗಳೂರು : ನವರಾತ್ರಿ ಸಂದರ್ಭ ಮಂಗಳೂರು ನಗರದಲ್ಲಿ ಉತ್ತರ ಭಾರತದ ಕೆಲ ಸಮುದಾಯ ಆಯೋಜಿಸಿರುವ ದಾಂಡಿಯಾ ನೃತ್ಯಕ್ಕೆ ವಿಶ್ವ ಹಿಂದೂಪರಿಷತ್‌ನ ದುರ್ಗಾ ವಾಹಿನಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ನವರಾತ್ರಿಯ ಸಂಧರ್ಭದಲ್ಲಿ ಉತ್ತರ ಭಾರತದಲ್ಲಿ ನಡೆಯುವಂತಹ ದಾಂಡಿಯಾ ನೃತ್ಯ (ಗರ್ಬ) ಹೆಸರಿನಲ್ಲಿ ಮಂಗಳೂರಿನಲ್ಲಿ ಕೆಲವೊಂದು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಲ್ಲಾ ಯುವಕ ಯುವತಿಯರು ಇದರಲ್ಲಿ ಭಾಗವಹಿಸುವಂತೆ ಮುಕ್ತವಾಗಿ ಆಮಂತ್ರಣ ಹಂಚಿರುತ್ತಾರೆ.
ದಾಂಡಿಯಾ ನೃತ್ಯ ಜಗನ್ಮಾತೆ ಮಾತೆ ಹೆಸರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವಾಗಿದ್ದು ಕಳೆದ ವರ್ಷಗಳಲ್ಲಿ ನಡೆದ ಇಂತಹ ಕಾರ್ಯಕ್ರಮದಲ್ಲಿ ಡ್ರಗ್ಸ್, ಮಾಧಕ ದೃವ್ಯ ಸೇವನೆ, ಮತ್ತು ಅಸಭ್ಯ ನೃತ್ಯಗಳ ಬಗ್ಗೆ ದೂರುಗಳು ಬಂದಿವೆ.
ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಾಗಿ ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ರೀಮತಿ ಶ್ವೇತ ಅದ್ಯಪಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.