LATEST NEWS
ನಿಜವಾದ ಡಿಕೆಶಿ ಮಾತು – ಈಗ ಮಂಗಳೂರು ರಾತ್ರಿ 9 ರ ನಂತರ ಬಹುತೇಕ ಡೆಡ್ ಸಿಟಿ

ಮಂಗಳೂರು ಮೇ 06: ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರು ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಪ್ರತೀಕಾರದ ಪೋಸ್ಟ್ ಗಳೇ ವೈರಲ್ ಆಗುತ್ತಿದೆ. ಈ ನಡುವೆ ಪೊಲೀಸರು ಬಿಗಿ ಬಂದೋಬಸ್ ಗಾಗಿ 9 ಗಂಟೆಗೆ ಮಂಗಳೂರು ನಗರವನ್ನು ಬಂದ್ ಮಾಡಿಸುತ್ತಿದ್ದಾರೆ. ರಾತ್ರಿ 9 ಗಂಟೆ ಬಳಿಕ ಮಂಗಳೂರಿನಲ್ಲಿ ಬಹುಪಾಲು ಅಘೋಷಿತ ಕರ್ಪ್ಯೂ ಸ್ಥಿತಿ ಇದೆ.
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಪೊಲೀಸರಿಗೆ ನಗರದಾದ್ಯಂದ ಬಂದೋಬಸ್ತ್ ಕಲ್ಪಿಸುವುದು ತಲೆನೋವಾಗಿ ಪರಿಣಮಿಸಿದೆ. ಯಾವುದೇ ಗಲಾಟೆ ಇಲ್ಲದೆ ಸೈಲೆಂಟ್ ಆಗಿದ್ದ ಮಂಗಳೂರಿನಲ್ಲಿ ಇದೀಗ ನಡೆದ ಹತ್ಯೆ ಪ್ರಕರಣ ಮತ್ತೆ ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಈ ನಡುವೆ ಪೊಲೀಸರು ಬಂದೋಬಸ್ತ್ ಗಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 9 ಗಂಟೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಬಂದ್ ಹಾಗೂ ಸೆಕ್ಷನ್ ಗಳಿಂದ ಮಂಗಳೂರು ಇನ್ನೂ ಸುಧಾರಿಸಿಲ್ಲ. ಅದರ ನಡುವೆ ಇದೀಗ ಪೊಲೀಸರು ಏಕಾಏಕಿ ಅಂಗಡಿ ಮುಂಗಟ್ಟು ಬಂದ್ ಮಾಡಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಾರ್, ರೆಸ್ಟೋರೆಂಟ್ ಗಳಿಗೆ ನುಗ್ಗಿದ ಪೊಲೀಸರು ಗ್ರಾಹಕರಲ್ಲಿ ಬೇಗ ಬೇಗ ಎದ್ದು ಮನೆಗೆ ಹೋಗಿ ಎನ್ನುತ್ತ ಶಟರ್ ಗಳನ್ನು ಎಳೆದು ಭಯ ಹುಟ್ಟಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಇಲ್ಲದಿದ್ದರೂ ಮುಂಜಾಗ್ರತೆ ನೆಪದಲ್ಲಿ ರೆಸ್ಟೋರೆಂಟ್ ಗಳನ್ನ ಪೊಲೀಸರು 9 ಗಂಟೆಗೆ ಒಳನುಗ್ಗಿ ಬಂದ್ ಮಾಡಿಸುವುದು ಎಷ್ಟು ಸರಿ? ಮೊದಲೇ ಸೂಚನೆ ಕೊಟ್ಟಿದ್ದರೆ ಓಕೆ, ಯಾವುದೇ ಸೂಚನೆ ಇಲ್ಲದೆ ಹೊಟೇಲ್ ಬಂದ್ ಮಾಡಿಸಿದರೆ ಮಾಡಿಟ್ಟ ಊಟ, ತಿಂಡಿಗಳನ್ನು ಏನು ಮಾಡಬೇಕು ಎಂದು ಹೊಟೇಲ್ ಮಾಲಕರು ಪ್ರಶ್ನಿಸಿದ್ದಾರೆ. ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಮಂಗಳೂರನ್ನ ಡೆಡ್ ಸಿಟಿ ಎಂದು ಕರೆದಿದ್ದರು. ಇದೀಗ ಡಿಸಿಎಂ ಮಾತು ಅಕ್ಷರಶಃ ಸತ್ಯವಾಗಿದೆ.