DAKSHINA KANNADA
ಮಂಗಳೂರಿನಿಂದ ಅಯೋಧ್ಯೆಗೆ ರೈಲಿಗಾಗಿ ಸಂಸದ ನಳಿನ್ ಕುಮಾರ್ ಪತ್ರ
ಮಂಗಳೂರು ಜನವರಿ 20: ಅಯೋಧ್ಯೆಗೆ ಮಂಗಳೂರಿನಿಂದ ರೈಲು ಓಡಾಟ ಕುರಿತಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದು, ಶೀಘ್ರವೇ ರೈಲು ಸಂಚಾರ ಆರಂಭಿಸುವ ಕುರಿತಂತೆ ಅಧಿಕೃತ ಆದೇಶ ಹೊರಬೀಳುವ ಸಂಭವ ಇದೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದಲೂ ಅಯೋಧ್ಯೆಗೆ ತೆರಳಲು ನೇರ ರೈಲು ಸಂಚಾರ ಆರಂಭಿಸುವಂತೆ ಸಂಸದ ನಳಿನ್ ಕುಮಾರ್ ಅವರು ಡಿಸೆಂಬರ್ 12ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿದ್ದರು. ಕರಾವಳಿಯ ಪುಣ್ಯ ಕ್ಷೇತ್ರಗಳಿಂದ ತೆರಳಲು ಅನುಕೂಲವಾಗಲು ಸುಬ್ರಹ್ಮಣ್ಯ ಮಾರ್ಗದಿಂದ ಮಂಗಳೂರು ಸೆಂಟ್ರಲ್, ಕಾರವಾರ, ಮಡ್ಯಾಂವ್ ಮತ್ತು ಪನ್ವೇಲ್ ಮೂಲಕ ಅಯೋಧ್ಯೆಗೆ ರೈಲು ಸಂಚಾರಕ್ಕೆ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.