LATEST NEWS
ಮಂಗಳೂರು : ಜೆಪ್ಪು ಮಹಾಕಾಳಿ ಪಡ್ಪುವಿನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಮೂವರಿಗೆ ಗಾಯ..!

ಮಂಗಳೂರು : ಮಂಗಳೂರು ನಗರದ ಜೆಪ್ಪು ಮಹಾಕಾಳಿ ಪಡ್ಪುವಿನಲ್ಲಿ ನಿರ್ಮಾಣ ಹಂತದ ಕೆಳ ಸೇತುವೆ ಕುಸಿದು ಬಿದ್ದಿದ್ದು, ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಕಳೆದ ಆರು ತಿಂಗಳಿಂದ ಇಲ್ಲಿ ಕಾಮಾಗಾರಿ ನಡೆಯುತ್ತಿದ್ದು ಸೋಮವಾರ ಅಪರಾಹ್ನ ಏಕಾಏಕಿ ಸ್ಲ್ಯಾಬ್ ನಿರ್ಮಾಣ ಕಾಮಗಾರಿ ವೇಳೆ ಕುಸಿತ ಉಂಟಾಗಿದೆ. ಸುಮಾರು 12 ಕಾರ್ಮಿಕರು ಸ್ಲ್ಯಾಬ್ ಕೆಲಸದಲ್ಲಿ ನಿರತರಾಗಿದ್ದರು, ಈ ಸಂದರ್ಭ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಕೊನೆಯ ಸ್ಲ್ಯಾಬ್ ಕಾಮಗಾರಿ ಪೂರ್ಣಗೊಳ್ಳುವ ವೇಳೆ ಈ ಅವಘಡ ಸಂಭವಿಸಿದೆ. ಮುಂಬೈನ ವಿಜಯ್ ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್, ಗುತ್ತಿಗೆದಾರ ಏಜೆನ್ಸಿ 50 ಕೋಟಿಯ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಸ್ಲ್ಯಾಬ್ ಗೆ ಕಾಂಕ್ರೀಟ್ ಹಾಕುವ ವೇಳೆ ಈ ದುರ್ಘಟನೆ ನಡೆದಿದೆ. ಕಳೆದ 30 ವರ್ಷಗಳಿಂದ ಈ ಇಂತಹ ಯೋಜನೆಗಳನ್ನು ಕಂಪೆನಿ ಕೈಗೆತ್ತಿಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಎರಡು ದಿನಗಳ ಹಿಂದೆಯಷ್ಟೇ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪಾಲಿಕೆ ಅಧಿಕಾರಿಗಳೊಂದಿಗೆ ಕಾಮಾಗಾರಿ ನಡೆಯುತ್ತಿರುವ ಸ್ಥಳವನ್ನು ಪರೀಶೀಲನೆ ನಡೆಸಿದ್ದರು.
