Connect with us

    LATEST NEWS

    ಮಂಗಳೂರು : ಕಾಸ್ತಾಲಿನೋ ಕಾಲೋನಿ ಕಳವು ಪ್ರಕರಣ ಬೇಧಿಸಿದ ಕಂಕನಾಡಿ ಪೊಲೀಸರು, ಆರೋಪಿಯೊಂದಿಗೆ 7 ಲಕ್ಷದ ಚಿನ್ನಾಭರಣ ವಶ..!

    ಮಂಗಳೂರು : ಮಂಗಳೂರು ನಗರದ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಕಾಸ್ತಾಲಿನೋ ಕಾಲೋನಿಯ ಮನೆಯೊಂದರಲ್ಲಿ  ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಆರೋಪಿಯನ್ನು ಕಳವು ಮಾಲು ಸಮೇತ ಬಂಧಿಸಿದ್ದಾರೆ.

    2021  ನವೆಂಬರ್ 11 ರಂದು ಈ ಪ್ರಕರಣ ನಡೆದಿತ್ತು. ಇಲ್ಲಿ ಕುಲಶೇಖರದ ಮಹಿಳೆಯೊಂದಿಗೆ ವಾಸಮಾಡಿಕೊಂಡಿದ್ದ ಆರೋಪಿ ರೋಹಿತ್ ಮಥಾಯಿಸ್  ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣ ತನಿಖೆ ಆರಂಭಿಸಿದ್ದ ಪೊಲೀಸರು  ತಲೆಮರೆಸಿಕೊಂಡಿದ್ದ ಆರೋಪಿ ರೋಹಿತ್ ಮಥಾಯಸ್ ನನ್ನು ಉಡುಪಿಯ ಬೆಳ್ಮಣ್ ನಲ್ಲಿ ಬಂಧಿಸಿ, ಆತನು ಕಳವು ಮಾಡಿದ್ದ  7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಆರೋಪಿ ರೋಹಿತ್ ವಿರುದ್ದ  2019 ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಿದಂತೆ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಹಣ ಮತ್ತು ಚಿನ್ನಾಭರಣಗಳ ಆಸೆಗಾಗಿ ತನ್ನ ನೆರೆಕರೆಯವಾರದ  ನಿವೃತ್ತ ಪಿಡಿಓ ಶ್ರೀಮತಿ ಭರತಲಕ್ಷ್ಮಿ  ರವರನ್ನು ಇತರರೊಂದಿಗೆ ಸೇರಿಕೊಂಡು ಆಕೆಯ ಬೆಳ್ಮಣ ಗ್ರಾಮದಲ್ಲಿನ ಮನೆಯಲ್ಲಿ ಕೊಲೆ ಮಾಡಿ, ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದು ಹೋದ ಪ್ರಕರಣದಲ್ಲಿ ಬಂಧನವಾಗಿ ಜೈಲುವಾಸ ಅನುಭವಿಸಿದ್ದ. ನಂತರ ಜಾಮೀನು ಪಡೆದು ಹೊರಬಂದು ವಿಚಾರಣೆಗೆ ಸಿಗದೇ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನು ತನ್ನ ಸಮುದಾಯಯ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಅವರ ವಿಶ್ವಾಸಗಳಿಸಿ, ನಂತರ ಅವರ ನಗದು ಹಣ ಹಾಗೂ ಚಿನ್ನಾಭರಣಗಳನ್ನುಕಳವು ಮಾಡಿಕೊಂಡು ಪರಾರಿಯಾಗುವ ಸ್ವಭಾವ ಈತನಾಗಿದೆ. ಈ ಪ್ರಯತ್ನದಲ್ಲಿರುವಾಗಲೇ ಕಂಕನಾಡಿ ನಗರ ಪೊಲೀಸರು ಮಾಹಿತಿಗಳ ಆಧಾರದಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿರುವ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದುಕೊಳ್ಳು ಯಶಸ್ವಿಯಾಗಿದ್ದಾರೆ..

    ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಗರಾಜ್ ಟಿ.ಡಿ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರುಗಳಾದ ವಿನಾಯಕ ಭಾವಿಕಟ್ಟಿ, ಶಿವಕುಮಾರ್, ಯೊಗೀಶ್ವರನ್ ಹಾಗೂ ಹೆಚ್.ಸಿ ಜಯಾನಂದ ಮತ್ತು ಸಿಬ್ಬಂಧಿಗಳಾದ ರಾಘವೇಂದ್ರ, ಗಂಗಾಧರ್, ರಾಜೆಸಾಬ ಮುಲ್ಲಾ, ಚೇತನ್, ಮುತ್ತಣ್ಣ ಮತ್ತು ಪ್ರವೀಣ್ ರವರು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply