DAKSHINA KANNADA
ಸಾಂಪ್ರಾದಾಯಿಕ ಮೆರಗಿನ ‘ಮಂಗಳೂರು ಶಾರದಾ ಮಹೋತ್ಸವ’ ಅದ್ದೂರಿಯಾಗಿ ಆರಂಭ..!

ಮಂಗಳೂರು : ಸಾಂಪ್ರಾದಾಯಿಕ ಮೆರಗಿನ ಮಂಗಳೂರು ಶ್ರೀ ವೆಂಕಟರಮಣ ದೇವಾಲಯ ಆಚಾರ್ಯ ಮಠ ವಠಾರದ 102ನೇ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ ಆಕ್ಟೋಬರ್ 8ರಿಂದ ಆರಂಭಗೊಂಡು 14ವರೆಗೆ ಅತ್ಯಂತ ವೈಭವಯುತವಾಗಿ ನಡೆಯಲಿದೆ.
2 ವರ್ಷದ ಹಿಂದೆಯಷ್ಟೇ ನೂರನೇ ವರ್ಷದ ಶಾರದಾ ಮಹೋತ್ಸವವನ್ನು ಶ್ರೀ ಶಾರದಾ ಮಹೋತ್ಸವ ಸಮಿತಿ ಅತ್ಯಂತ ವೈಭವಪೂರ್ಣವಾಗಿ ನಡೆಸಿತ್ತು. ಅದೇ ರೀತಿ ಸಂಭ್ರಮದಿಂದ ಈ ಮಹೋತ್ಸವನ್ನು ಶ್ರಧ್ಧ ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ.
ಮಂಗಳೂರು ನಗರ ಹಾಗೂ ಪರವೂರಿನ ಭಕ್ತಾದಿಗಳು ತನುಮನ ಸಹಾಯ ನೀಡಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ಸಿಗೊಳಿಸುತ್ತಿದ್ದಾರೆ.
ಆಕ್ಟೋಬರ್ 8ರಂದು ರಾತ್ರಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ರಾಜಾಂಗಣದಿಂದ ಶ್ರೀ ಉಮಾಮಹೇಶ್ವರಿ ದೇವಳ ರಸ್ತೆ , ರಾಮಮಂದಿರ , ನಂದಾ ದೀಪ ರಸ್ತೆ , ಹೂಮಾರುಕಟ್ಟೆ ರಸ್ತೆ , ರಥಬೀದಿಯಾಗಿ ಉತ್ಸವಸ್ಥಾನಕ್ಕೆ ತರಲಾಯಿತು .
ಆ.9ರಂದು ಬೆಳಗ್ಗೆ 7 ಗಂಟೆಗೆ ಪ್ರತಿಷ್ಠಾಪನೆ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲಾಯಿತು .ಆ 13ವರೆಗೆ ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ . ಪ್ರತಿ ದಿನವೂ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಶ್ರೀ ಶಾರದಾ ಮಾತೆಯ ದರುಶನವನ್ನು ಪಡೆದುಕೊಳ್ಳಬಹುದು.ಆ13ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ ಮಾಡಲಾಗುವುದು.ಅಂದು ಬೆಳಗ್ಗೆ 10 ಘಂಟೆಗೆ ವಿದ್ಯಾರಂಭ ಕಾರ್ಯಕ್ರಮ ನಡೆಯಲಿದೆ.ಅಂದು ಸಂಜೆ 6 ಗಂಟೆಗೆ ವಿಶೇಷ ದೀಪಾಲಂಕಾರ ಸೇವೆ ಜರಗಲಿದೆ.ಆ.14ರಂದು ಸಂಜೆ 5 ಗಂಟೆಗೆ ಶ್ರೀ ಶಾರದಾ ಮಾತೆಗೆ ಪೂರ್ಣಾಲಂಕಾರ ನಡೆಯಲಿದೆ.ಚಿತ್ರಾ ಪುರ ಮಠ ಸಂಸ್ಥಾನದ ಪರಮ ಪೂಜ್ಯ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಇತಿಹಾಸ ಪ್ರಸಿದ್ಧ ಮಂಗಳೂರು ಶಾರದೆಯ ವಿಸರ್ಜನಾ ಮೆರವಣಿಗೆಯಲ್ಲಿ ಚಿತ್ರಾ ಪುರ ಮಠ ಸಂಸ್ಥಾನದ ಪರಮ ಪೂಜ್ಯ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಗಳವರ ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ 14-10-2024ರ ಸೋಮವಾರ ನಡೆಯಲಿರುವುದು.

ಸಾಯಂಕಾಲ 4.30ಕ್ಕೆ ಸರಿಯಾಗಿ ಶ್ರೀಗಳಿಗೆ ಶ್ರೀ ವೆಂಕಟರಮಣ ದೇವಸ್ಠಾನದ ಆಡಳಿತ ಮಂಡಳಿ ಮತ್ತು ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಶ್ರೀ ದೇವಳದಲ್ಲಿ ಭವ್ಯ ಸ್ವಾಗತ, ಶ್ರೀ ದೇವರ ಭೇಟಿ, ಶ್ರೀ ಶಾರದಾ ಮಾತೆಯ ವಸಂತ ಮಂಟಪಕ್ಕೆ ಚಿತ್ತೈಸಿ ಶ್ರೀ ಶಾರದಾ ಮಾತೆಗೆ ಶ್ರೀ ಶ್ರೀಗಳ ದಿವ್ಯ ಹಸ್ತದಿಂದ ಮಾಹಾ ಆರತಿ, ಸಮಿತಿಯವತಿಯಿಂದ ಸ್ವಾಗತ, ಶ್ರೀ ಶ್ರೀಗಳಿಂದ ಅಶೀರ್ವಾದಪೂರ್ವಕ ಸಮಿತಿಯರಿಗೆ ಮಾತ್ರ ಪ್ರಸಾದ, ಶ್ರೀ ಶ್ರೀಗಳ ಸ್ವಮಠಕ್ಕೆ ಪ್ರಸ್ಠಾನ.
ರಾತ್ರೆ 8.45ಕ್ಕೆ ಶ್ರೀ ಶ್ರೀಗಳು ಸರಸ್ವತಿ ಕಲಾಮಂಟಕ್ಕೆ ಚಿತ್ತೈಸಿ ಅಲ್ಲಿರುವ ವೇದಿಕೆಯಲ್ಲಿ ಕುಳಿತು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯ ವೀಕ್ಷಣೆ ಬಳಿಕ ಸ್ವಮಠಕ್ಕೆ ಪ್ರಸ್ಠಾನ.ಅಂದು ರಾತ್ರಿಗೆ 8 ಗಂಟೆಗೆ ಶ್ರೀ ಶಾರದಾ ಮಾತೆಯ ವಿಸರ್ಜನೆಯ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಉತ್ಸವ ಸ್ಥಾನದಿಂದ ಹೊರಡುವ ಮರವಣಿಗೆ ಶ್ರೀ ಮಹಾಮಾಯಿ ದೇವಾಲಯವಾಗಿ , ಕೆನರಾ ಹೈಸ್ಕೂಲಿನ ಹಿಂಬದಿಯಿಂದ ಮಂಜೇಶ್ವರ ಗೋವಿಂದ ಪೈಯ ವೃತ್ತ ತಲುಪಿ ಅಲ್ಲಿಂದ ಡೊಂಗರಕೇರಿಯ ಮೂಲಕ ನ್ಯೂಚಿತ್ರಾ ಟಾಕೀಸ್ , ಬಸವನಗುಡಿ , ಚಾಮರಗಲ್ಲಿ , ರಥ ಬೀದಿಯಾಗಿ ಶ್ರೀ ಮಹಾಮಾಯಿ ತೀರ್ಥದಲ್ಲಿ ಸಮಾಪನಗೊಳ್ಳಲಿದೆ.
ಈ ಮಹೋತ್ಸವದಲ್ಲಿ ಪ್ರತಿ ದಿನವೂ ಸಹಸ್ರಾರು ಭಕ್ತಾದಿಗಳು ಪಾಲ್ಗೊಳ್ಳಲಿದ್ದು , ದೇವಿಯ ಅಶೀರ್ವಾದ ಪಡೆಯುತ್ತಾರೆ.ಆ 9ರಿಂದ 13ವರೆಗೆ ಪ್ರತಿದಿನವೂ ರಾತ್ರಿ 7 ಗಂಟೆಯಿಂದ 9 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿವೆ.ಆ10ರಂದು ರಾತ್ರಿ 8 ಘಂಟೆಗೆ ದುರ್ಗಾ ನಮಸ್ಕಾರ ಸೇವೆ ನಡೆಯಲಿದೆ. ಅದಾದ ಬಳಿಕ 8.30ರಿಂದ 10 ಗಂಟೆವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆಯೂ ಜರಗಲಿದೆ.
ದೇವಿಗೆ ಅರ್ಪಿತವಾದ ಸೀರೆಗಳ ಏಲಂ ಆ20ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಶಾರದಾ ಮಾತೆಗೆ ಅಲಂಕರಿಸಿ ಸೀರೆಗಳನ್ನು ಪಡೆದುಕೊಳ್ಳಲು ಭಕ್ತಾದಿಗಳಿಗೆ ಅಂದು ಅವಕಾಶ ಇದೆ ಎಂದು ಶ್ರೀ ಶಾರದಾ ಮಹೋತ್ಸವ ಸಮಿತಿ ತಿಳಿಸಿದೆ.
ಚಿತ್ರ : ಮಂಜು ನೀರೇಶ್ವಾಲ್ಯ