Connect with us

    LATEST NEWS

    ಸೆಕ್ಷನ್ 144 ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ 7 ಮಂದಿಯನ್ನು ಬಂಧಿಸಿದ ಪೊಲೀಸರು

    ಸೆಕ್ಷನ್ 144 ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ 7 ಮಂದಿಯನ್ನು ಬಂಧಿಸಿದ ಪೊಲೀಸರು

    ಮಂಗಳೂರು ಮಾರ್ಚ್ 24: ಕರೋನಾ ಹಿನ್ನೆಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ಲಾಕ್​ ಡೌನ್ ಆದೇಶವಿದ್ದರೂ ಆದೇಶ ಉಲ್ಲಂಘಿಸಿದ ಅನಗತ್ಯವಾಗಿ ತಿರುಗಾಡುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಹಾಸನ ಮೂಲದ ಪ್ರಸ್ತುತ ನಗರದ ಪ್ರಭಾತ್ ಟಾಕೀಸ್​ನಲ್ಲಿ ವಾಚ್​ಮ್ಯಾನ್​ ಆಗಿರುವ ಜೇಮ್ಸ್(45), ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ, ಪ್ರಸ್ತುತ ಜೀವನ ದೀಪ್ ಪಬ್ಲಿಕೇಷನ್​ಲ್ಲಿರುವ ವಿಮೇಶ್(30), ಉತ್ತರ ಪ್ರದೇಶ ರಾಜ್ಯದ ಮಹದಯಾ ಬರ್ಲಾಪುರ ಮೂಲದ ಪ್ರಸ್ತುತ ಕುದ್ರೋಳಿ ಜೆ.ಎಂ. ರೋಡ್​ನ ನಿವಾಸಿ ಅಮೀರ್​ ಹಾಜು ಅನ್ಸಾರಿ, ರಾಜಸ್ಥಾನ ಮೂಲದ ಪ್ರಸ್ತುತ ಕುದ್ರೋಳಿ ದೇವಾಲಯದ ಮುಂಭಾಗ ನಿವಾಸಿ ಬಲರಾಮ ಚೌಧರಿ(32), ಅಸ್ಸೋಂ ರಾಜ್ಯದ ಮಜೂರಿ ಮೂಲದ ಪ್ರಸ್ತುತ ಬಂದರ್​ನಲ್ಲಿರುವ ಅಜಾದಿ ಸ್ಟೀಲ್​ನಲ್ಲಿ ಉದ್ಯೋಗಿಯಾಗಿರುವ ರಾಹುಲ್ ಪಾಂಡೆ(18), ಉಳ್ಳಾಲ ಇನ್ಲ್ಯಾಂಡ್ ಇಂಫಾಲದ ಸಿದ್ದೀಕ್, ತೊಕ್ಕೊಟ್ಟು ಕೃಷ್ಣ ನಗರದ ವಿನಯ್ ಬಂಧಿತ ಆರೋಪಿಗಳು.

    ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರೋದರಿಂದ ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಆದರೆ ಆದೇಶವನ್ನು ಉಲ್ಲಂಘಿಸಿರೋದರಿಂದ ಕೇಂದ್ರ ಉಪ ವಿಭಾಗ ಹಾಗೂ ಪಶ್ಚಿಮ ಉಪ ವಿಭಾಗದ ಪೊಲೀಸರು ಈ ಏಳು ಮಂದಿಯನ್ನು ಬಂಧಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *