DAKSHINA KANNADA
ಮಂಗಳೂರು : ನಿವೃತ್ತ ಪೊಲೀಸ್ ಅಧಿಕಾರಿ ಎಂ. ಎನ್. ರಾವ್ ನಿಧನ..!

ಮಂಗಳೂರು : ನಿವೃತ್ತ ಪೊಲೀಸ್ ಅದಿಕಾರಿ ಎಂ. ಎನ್ . ರಾವ್ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ 6 ತಿಂಗಳ ಹಿಂದೆಯಷ್ಟೆ ಎಂ. ಎನ್ . ರಾನ್ ನಿವೃತ್ತಿ ಹೊಂದಿದ್ದರು.
ಎಂ ಎನ್ ರಾವ್ ಅವರು ಮಂಗಳೂರು ನಗರ ಸೇರಿಂತೆ ಆನೇಕ ಕಡೆ ಕರ್ತವ್ಯವನ್ನು ಮಾಡಿದ್ದು, ಜನಪರ ಅಧಿಯಾಗಿ ಗುರ್ತಿಸಿಕೊಂಡಿದ್ದರು.

ನಿವೃತ್ತಿಯ ಬಳಿಕವು ಇಲಾಖೆಯ ನಿಯಮದಂತೆ ಪೊಲೀಸ್ ವಸತಿ ಗೃಹದಲ್ಲೇ ವಾಸ್ತವ್ಯ ಹೊಂದಿದ್ದ ಅವರು ಸಂಪ್ಯ ಉದಯಗಿರಿಯಲ್ಲಿ ಮನೆ ಖರೀದಿಸಿ ಅದರ ನವೀಕರಣ ಕೆಲಸ ಕಾರ್ಯ ನಡೆಸುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಮಂಗಳೂರು ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಭಾನುವಾರ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾಗಿದ್ದಾರೆ.
ಮೃತರ ಪತ್ನಿ ಕಾಸರಗೋಡಿನಲ್ಲಿ ಶಿಕ್ಷಕಿಯಾಗಿದ್ದು, ಪುತ್ರಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದಾರೆ. ಪುತ್ರ ಪಿಯುಸಿ ಕಲಿಯುತ್ತಿದ್ದಾರೆ.