Connect with us

LATEST NEWS

ಮಂಗಳೂರು – ಧಾರ್ಮಿಕ ಕೇಂದ್ರಗಳೂ ಸೇರಿದ ಸಾವಿರಕ್ಕೂ ಅಧಿಕ ಸಂಸ್ಥೆಗಳಿಗೆ ಪೊಲೀಸರಿಂದ ನೋಟಿಸ್

ಮಂಗಳೂರು ಎಪ್ರಿಲ್ 07: ಆಜಾನ್ ವಿವಾದ ಬಳಿಕ ಇದೀಗ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಮೈಕ ಬಳಕೆ ಕುರಿತಂತೆ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ಪೊಲೀಸರು ಮುಂದಾಗಿದ್ದು, ಈ ಹಿನ್ನಲೆ ಮಂಗಳೂರಿನಲ್ಲಿಯೂ ನಿಯಮದಂತೆ ಧ್ವನಿವರ್ಧಕ ಬಳಕೆಗೆ ಮಂಗಳೂರು ಪೊಲೀಸರು ನೋಟಿಸ್‌ ಮೂಲಕ ಸೂಚನೆ ನೀಡುವ ಕಾರ್ಯ ಆರಂಭಿಸಿದ್ದಾರೆ.


ನಗರದಲ್ಲಿ ಈಗಾಗಲೇ ಪ್ರಮುಖ ಮಸೀದಿ, ದೇವಸ್ಥಾನ, ಚರ್ಚ್, ಶಿಕ್ಷಣ ಸಂಸ್ಥೆಗಳು, ಮನರಂಜನಾ ಸ್ಥಳಗಳಿಗೆ ನೋಟಿಸ್‌ ನೀಡುವ ಕಾರ್ಯ ನಡೆಯುತ್ತಿದ್ದು, ಪ್ರಾಥಮಿಕ ಹಂತದಲ್ಲಿ ಧ್ವನಿವರ್ಧಕ ಬಳಸುವ 1001 ಸ್ಥಳಗಳನ್ನು ಗುರುತಿಸಿ ನೋಟಿಸ್‌ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ರಾಜ್ಯ ಸರಕಾರ, ಹೈಕೋರ್ಟ್‌ ಆದೇಶ ಹಾಗೂ ಹಿರಿಯ ಅಧಿಕಾರಿಗಳು ನೀಡಿರುವ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಧ್ವನಿವರ್ಧಕ ಬಳಸುವ 357 ದೇವಸ್ಥಾನಗಳು, 168 ಮಸೀದಿಗಳು, 95 ಚರ್ಚ್‌ಗಳು, 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು, 98 ಮನರಂಜನಾ ಸ್ಥಳಗಳು, 68 ಮದುವೆ ಹಾಲ್‌ಗಳು ಮತ್ತು ಕಾರ್ಯಕ್ರಮ ಸ್ಥಳಗಳು, ಇತರ 49 ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಧ್ವನಿವರ್ಧಕ ಬಳಕೆಯ ವೇಳೆ ಶಬ್ದ ಮಾಲಿನ್ಯಕ್ಕೆ ಅವಕಾಶವಾಗದಂತೆ ನಿಯಮ ಪಾಲನೆ ಮಾಡುವಂತೆ ನೋಟಿಸ್‌ ನೀಡುವ ಕಾರ್ಯ ಆರಂಭಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *