Connect with us

    LATEST NEWS

    ಇತಿಹಾಸ ಸೃಷ್ಟಿಸಿದ ಮಂಗಳೂರು ಪೊಲೀಸ್, 6 ಕೋ.ಮೌಲ್ಯದ 6 ಕೆ.ಜಿಗೂ ಅಧಿಕ ಡ್ರಗ್ಸ್ ಜೊತೆ ಕಿಂಗ್‌ಪಿನ್ ಖಾಕಿ ಖೆಡ್ಡಕ್ಕೆ..!

    ಮಂಗಳೂರು: ಮಂಗಳೂರು ನಗರ ಪೊಲೀಸರು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ದಾಳಿ ನಡೆಸಿ ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಆರು ಕೆ.ಜಿಗೂ ಅಧಿಕ ಎಂಡಿಎಂಎ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ನೈಜೀರಿಯಾ ಪ್ರಜೆಯನ್ನು ವಶಕ್ಕೆ ಪಡೆದಿದ್ದಾರೆ.

    ಸಿಸಿಬಿ ತಂಡಕ್ಕೆ ಡಿಜಿಪಿ ಒಂದು ಲಕ್ಷ ರೂ. ಬಹುಮಾನ ಘೋಷಿಸಿದರೆ ಮಂಗಳೂರು ಕಮಿಷನರೇಟ್ ನಿಂದ ಪ್ರತ್ಯೇಕ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
    ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೌಲ್ಯದ ಡ್ರಗ್ ದಂಧೆ ಬಯಲಿಗೆಳೆದ ಪ್ರಕರಣ ಇದಾಗಿದೆ. ವಾರದ ಹಿಂದೆ ಹೈದರ್ ಅಲಿ ಎಂಬಾತನನ್ನು ವಶಕ್ಕೆ ಪಡೆದು 15 ಗ್ರಾಂ ಎಂಡಿಎಂ ವಶಕ್ಕೆ ಪಡೆಯಲಾಗಿತ್ತು. ಈತನನ್ನ ಕೂಲಂಕೂಶ ತನಿಖೆಗೆ ಒಳಪಡಿಸಿದಾಗ ಈ ಕರಾಳ ದಂಧೆಯ ಮಾಹಿತಿ ಲಭ್ಯವಾಗಿದೆ.


    ಈ ಸಂಬಂಧ ಮಾಹಿತಿ ನೀಡಿದ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಮಂಗಳೂರು ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೌಲ್ಯದ ಡ್ರಗ್ ದಂಧೆ ಬಯಲಿಗೆಳೆದ ಪ್ರಕರಣ ಇದಾಗಿದೆ. ಒಂದು ಬ್ಯಾಂಕ್ ವಿವರದಡಿ ಅಳವಾಗಿ ತನಿಖೆ ನಡೆಸಿದಾಗ ನೈಜೀರಿಯನ್ ಪ್ರಜೆಯ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಆತನ ಜಾಡು ಹಿಡಿದು ಬೆಂಗಳೂರಿಗೆ ತೆರಳಿ ಆತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರ ಅತ್ಯುತ್ತಮ ಕಾರ್ಯಾಚರಣೆ ಇದಾಗಿದೆ ಎಂದರು.

    ಆತನಿಂದ 35 ಡೆಬಿಟ್ ಕಾರ್ಡ್ ಗಳು, 10 ಬ್ಯಾಂಕ್ ಪಾಸ್ ಪುಸ್ತಕಗಳು, 17 ಇನ್ ಆಕ್ಟಿವ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅತನ ಪಾಸ್‌ಪೋರ್ಟ್ ಸಹಿತ ಎಲ್ಲಾ ದಾಖಲೆ ವಶಕ್ಕೆ ಪಡೆಯಲಾಗಿದೆ. ಸಣ್ಣ ಸಣ್ಣ ಪ್ಯಾಕೆಟ್ ಗಳ ಮೂಲಕ ರಾಜ್ಯದ ಹಲವಡೆ ಆತ ಡ್ರಗ್ ಪೂರೈಕೆ ಮಾಡುತ್ತಿದ್ದ. ನಗರದಲ್ಲಿ ಬಿಸ್ಕಿಟ್ ಪ್ಯಾಕೆಟ್, ಗುಟ್ಕ, ಚಿಪ್ಸ್ ನ ಪ್ಯಾಕೆಟ್ ಗಳಲ್ಲಿ ಕಸ ಎಸೆಯೋ ಜಾಗದಲ್ಲಿ ಎಸೆದು, ಬಳಿಕ ಪೆಡ್ಲರ್ ಅದರ ಫೋಟೊ ತೆಗೆದು ಪೂರೈಕೆದಾರನಿಗೆ ಮಾಹಿತಿ ರವಾನೆಯಾಗುತ್ತದೆ. ಅ ಬಳಿಕ ಅವರು ಅಲ್ಲಿಂದ ಅದನ್ನು ತೆಗೆದುಕೊಂಡು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿರುವುದು ಪತ್ತೆಯಾಗಿದೆ ಎಂದು ಅನುಪಮ್ ಅಗರ್‌ವಾಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸಿಪಿ ಮನೋಜ್ ಕುಮಾರ್, ಇನ್ಸ್ ಪೆಕ್ಟರ್ ಶ್ಯಾಮ್‌ ಸುಂದರ್ ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *