DAKSHINA KANNADA
ಅಂಡರ್ ವರ್ಲ್ಡ್ ಸದ್ದು ಅಡಗಿಸಿದ ಮಂಗಳೂರು ಪೊಲೀಸರು, ಕಲಿಯೋಗಿಶ್ ಇಬ್ಬರು ಸಹಚರರ ಬಂಧನ..!
ಮಂಗಳೂರು : ಮಂಗಳೂರಿನಲ್ಲಿ ಅಂಡರ್ ವರ್ಲ್ಡ್ ಸದ್ದನ್ನು ನಗರ ಪೊಲೀಸರು ಅಡಗಿಸಿದ್ದು ಅಂಡರ್ ವಲ್ಡ್ ಡಾನ್ ಕಲಿಯೋಗಿಶ್ ಇಬ್ಬರು ಸಹಚರನ್ನು ಬಂಧಿಸಿದ್ದಾರೆ.
ನಗರದ ಫಳ್ನೀರ್ ನಲ್ಲಿ ಕಾರ್ಯಾಚರಣೆ ಮಾಡಿದ ನಗರ ಕ್ರೈಂ ಬ್ರಾಂಚ್ ಖಚಿತ ಮಾಹಿತಿ ಆಧಾರಿಸಿ ಕಾರು ತಪಾಸಣೆ ನಡೆಸುತ್ತಿದ್ದಾಗ ಇನ್ನೊವ ಕಾರಿನಲ್ಲಿ ಸಂಚಾರಿಸುತ್ತಿದ್ದ ಭೂಗತ ಪಾತಕಿ ಕಲಿಯೋಗಿಶ್ ಸಹಚರರನ್ಜು ಬಂಧಿಸಲು ಯಶಸ್ವಿಯಾಗಿದ್ದಾರೆ. ಕೇರಳ ಕಾಸರಗೋಡು ನಿವಾಸಿ ಮಹಮ್ಮದ್ ಹನೀಫ್(42) , ಮುಡಿಪು ಬಂಟ್ವಾಳ ನಿವಾಸಿ ಮಹಮ್ಮದ್ ರಫೀಕ್ (36) ಬಂಧಿತರು.
ಬಂಧಿತರಿಂದ 2 ಪಿಸ್ತೂಲ್ ಗಳು, MDMA ವಶಕ್ಕೆ ಪಡೆದಿದ್ದಾರೆ. ಪಿಸ್ತೂಲನ್ನು ಮುಡಿಪು ರಫೀಕ್ ಆಗ್ರಾದಿಂದ ಮತ್ತೊಂದನ್ನು ಮಡಿಕೇರಿಯಿಂದ ಕೊಂಡುಕೊಂಡಿದ್ದಾರೆ. ಕಾರ್ಕಳದ ದಿನೇಶ್ ಶೆಟ್ಟಿ ಹತ್ಯೆಗಾಗಿ ಸುಪಾರಿ ಪಡೆದು ಈ ಪಿಸ್ತೂಲನ್ನು ಪಡೆದಿದ್ದರು. ಕೆಲ ದಿನಗಳ ಹಿಂದೆ ನಗರದ ಸೌರಾಷ್ಟ್ರ ಮಳಿಗೆ ಮಾಲಿಕರಿಗೆ ಜೀವ ಬೆದರಿಕೆ ಹಾಕಿ 50 ಲಕ್ಷ ರೂಪಾಯಿ ನೀಡುವಂತೆ ಕಲಿ ಯೋಗಿಶ್ ಸಹಚರರು ಬೆದರಿಕೆಯೊಡ್ಡಿದ್ದರು. ಈ ಕೃತ್ಯಕ್ಕೆ ಆರೋಪಿಗಳು ಮುಂಗಡ ಹಣವನ್ನು ಪಡೆದಿದ್ದರು ಆದರೆ ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದ ಕೃತ್ಯ ನಡೆಸುವಲ್ಲಿ ವಿಫಲವಾಗಿದ್ದರು. ಈ ಆರೋಪಿಗಳು ಕಳೆದ 15 ವರ್ಷಗಳಿಂದ ಬೇರೆ ಬೇರೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ. ಕೇರಳ ಕರ್ನಾಟಕದಲ್ಲಿ ಹನೀಫ್ ಮೇಲೆ ವಿವಿಧ ಠಾಣೆಗಳಲ್ಲಿ ಆನೇಕ ಪ್ರಕರಣಗಳು ದಾಖಲಾಗಿವೆ. ಪುತ್ತೂರಿನ ರಾಜಧಾನಿ ಜುವೆಲ್ಲರ್ಸ್ ಪುತ್ತೂರು, ಸಂಜಿವ ಶೆಟ್ಟಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣದ ಈ ಪ್ರಮುಖ ಆರೋಪಿ.ಇನ್ನೋರ್ವ ಆರೋಪಿ ಮಹಮ್ಮದ್ ರಫೀಕ್ ಮೇಲೆ ಬೇರೆ ಬೇರೆ ಠಾಣೆಯಲ್ಲಿ 9 ಪ್ರಕರಣಗಳು ದಾಖಲಾಗಿವೆ. ಕಲಿ ಯೋಗಿಶ್ ವಿದೇಶದಲ್ಲಿದ್ದು ಈ ಕೃತ್ಯಕ್ಕೆ ರೂಪುರೇಷೆ ಸಿದ್ದಪಡಿಸಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.