Connect with us

    LATEST NEWS

    ಮಂಗಳೂರು : ಅಪ್ರಾಪ್ತೆಯ ಗರ್ಭಪಾತ ಮಾಡಿದ ವೈದ್ಯರನ್ನು ದೋಷಮುಕ್ತಗೊಳಿಸಿದ ಪೋಕ್ಸೋ ಕೋರ್ಟ್..!!

    ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಗರ್ಭಪಾತ ಮಾಡಿದ ಚಿಕ್ಕಮಗಳೂರಿನ ವೈದ್ಯ ಡಾ. ಚಂದ್ರಶೇಖರ್ ಅವರನ್ನು ಆರೋಪ ಮುಕ್ತಗೊಳಿಸಿ  ಮಂಗಳೂರಿನ ಎರಡನೇ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.

    ಲೈಂಗಿಕ ದೌರ್ಜನ್ಯಕ್ಕೊಳಗಾದ 12 ವರ್ಷ ವಯಸ್ಸಿನ ಬಾಲಕಿಯನ್ನು ಆರೋಪಿ ಸುಧೀರ್ ಮತ್ತು ಆತನ ಮನೆಯವರು ಗರ್ಭಪಾತ ಮಾಡಿಸಲು ಚಿಕ್ಕಮಗಳೂರಿನ ಡಾ. ಚಂದ್ರಶೇಖರ್ ಅವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯಾಧಿಕಾರಿಗಳು ಬಾಲಕಿಯನ್ನು ವಿಚಾರಿಸಿದಾಗ ಆಕೆಯ ಪ್ರಾಯ 18 ವರ್ಷ 3 ತಿಂಗಳೆಂದು, ಆರೋಪಿ ಸುಧೀರ್ ತನ್ನ ಗಂಡನೆಂದು ತಿಳಿಸಿದ್ದಳು. ಆಸ್ಪತ್ರೆಗೆ ಬರುವ ಮುಂಚೆ ಆಕೆಗೆ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದ ಕಾರಣ ತೀವ್ರ ರಕ್ತಸ್ರಾವ ಆಗಿದ್ದು ವೈದ್ಯರು ಸಂತ್ರಸ್ತೆಯ ಪ್ರಾಣ ಉಳಿಸುವ ಉದ್ದೇಶದಿಂದ ಸಂತ್ರಸ್ತೆಯ ಗಂಡನೆಂದು ತಿಳಿಸಿದ್ದ ಆರೋಪಿ ಸುಧೀರನಿಂದ ಕಾನೂನು ಪ್ರಕಾರ ಒಪ್ಪಿಗೆ ಪತ್ರ ಪಡೆದುಕೊಂಡು ಕೂಡಲೇ ಚಿಕಿತ್ಸೆ ನೀಡಿ ಗರ್ಭದಲ್ಲಿ ಉಳಿದಿದ್ದ ರಕ್ತ ಮಿಶ್ರಿತ ಕಣಗಳನ್ನು ತೆಗೆದಿದ್ದರು.  ಆದ್ದರಿಂದ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ವೈದ್ಯರು ಸಂತ್ರಸ್ತೆಗೆ ಸಂಬಂಧಿಸಿದ ಎಲ್ಲ ವೈದ್ಯಕೀಯ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು. ಡಾ.ಚಂದ್ರಶೇಖರ್ ಅವರ ಪರವಾಗಿ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಮತ್ತು ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು. ನ್ಯಾಯಾಲಯವು ಡಾ. ಚಂದ್ರಶೇಖರ್ ಅವರನ್ನು ದೋಷಮುಕ್ತಗೊಳಿಸಿದರೆ  ಸುಧೀರ್ ದೋಷಿ ಎಂದು ತೀರ್ಪು ನೀಡಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *