DAKSHINA KANNADA
ಹೊಂಡಗುಂಡಿಗಳಿಂದ ಕೂಡಿದ ಮಂಗಳೂರು ಪಣಂಬೂರು ರಾಷ್ಟ್ರೀಯ ಹೆದ್ದಾರಿ , ಯಮಲೋಕಕ್ಕೆ ರಹದಾರಿ..!!
ಮಂಗಳೂರು: ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಪಣಂಬೂರು ಭಾಗ ಹೊಂಡಗುಂಡಿಗಳಿಂದ ಕೂಡಿದ್ದು, ಯಮಲೋಕಕ್ಕೆ ರಹದಾರಿ ದಾರಿಯಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಗೇಲ್ ಸಿ.ಎನ್.ಜಿ ಸ್ಟೇಷನ್ ಮುಂದುಗಡೆ ಹೆದ್ದಾರಿ ಮಧ್ಯೆ ಬೃಹತ್ ಆಕಾರದ ಹೊಂಡ ಸೃಷ್ಟಿಯಾಗಿದ್ದು ದಿನನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ, ದಿನ ನಿತ್ಯ ಹಲವಾರು ಅಪಘಾತದ ದೃಶ್ಯಗಳನ್ನು ಕಣ್ಣಾರೆ ಕಂಡು ಆತಂಕ ವ್ಯಕ್ತಪಡಿಸಿದ ಸ್ಥಳೀಯ ಲಾರಿ ಚಾಲಕರು ಈ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ದೂರಿಕೊಂಡಿದ್ದಾರೆ.
ಹೆದ್ದಾರಿಯ ಮಧ್ಯೆ ದಿಢೀರನೆ ಎದುರಾಗುವ ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ರಸ್ತೆಯಲ್ಲಿ ಸಾಗುವ ಚಾಲಕರ ನಿಯಂತ್ರಣ ತಪ್ಪಿ ದಿನನಿತ್ಯ ಬೆಳಿಗ್ಗೆಯಿಂದ ರಾತ್ರಿವರೆಗೂ ಅಪಘಾತಗಳು ಸಂಭವಿಸುತ್ತಲೇ ಇದ್ದು. ಈ ದಾರಿಯಲ್ಲಿ ಬಂದವರು ಮತ್ತೆ ಮನೆ ಸೇರುತ್ತಾರೆ ಎಂಬ ಖಾತ್ರಿ ಇಲ್ಲ. ಹೈವೇ ಕಂಟ್ರೋಲ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಮಾಹಿತಿ ನೀಡಿದ್ದೇವೆ ಅವರೆಲ್ಲರೂ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಕೆಲವೊಂದು ಬಾರಿ ಅಪಘಾತಗಳು ಹೆಚ್ಚಾದಂತೆ ಚಾಲಕರು ನಾವೆಲ್ಲ ಸೇರಿ ಯಾವುದೇ ಅನಾಹುತಗಳು ಸಂಭವಿಸದಂತೆ ಸೂಚನಾ ವ್ಯವಸ್ಥೆಗಳನ್ನು ಮಾಡಿ ರಾತ್ರಿಯಿಡೀ ಕಾಯುವ ಪರಿಸ್ಥಿತಿ ಎದುರಾಗಿತ್ತು ಎಂದು ಉದ್ಯಮಿ ಜಾಸೀಮ್ ಅಲಿ ಚೊಕ್ಕಬೆಟ್ಟು ವಿವರಿಸಿದ್ದಾರೆ, ಅಲ್ಲದೆ ಆದಷ್ಟು ಬೇಗ ಗುಂಡಿ ಮುಚ್ಚುವ ಕಾರ್ಯ ನಡೆಯದಿದ್ದರೆ ಇಲ್ಲಿಯ ಚಾಲಕರು ನಾವೆಲ್ಲ ಸೇರಿ ಹೆದ್ದಾರಿ ಮಧ್ಯೆ ನಿಂತು ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.