Connect with us

DAKSHINA KANNADA

ಮಂಗಳೂರು: 4 ತಿಂಗಳಿಂದ ಸಿಗದ ಗೌರವಧನ, ಅತಿಥಿ ಶಿಕ್ಷಕರಿಂದ ಪ್ರತಿಭಟನೆ

ಮಂಗಳೂರು, ಸೆಪ್ಟೆಂಬರ್ 27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 900 ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ಕಳೆದ 4 ತಿಂಗಳಿನಿಂದ ಗೌರವಧನ ಬಿಡುಗಡೆಯಾಗಲಿಲ್ಲ ಮತ್ತು ಉದ್ಯೋಗದ ಭದ್ರತೆ ಇಲ್ಲ ಎಂಬ ಹಲವಾರು ಸಮಸ್ಯೆಯನ್ನು ಇಟ್ಟುಕೊಂಡು ಇಂದು ಅತಿಥಿ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಅವರ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಯಿತು.

ಅತಿಥಿ ಶಿಕ್ಷಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಿಯೋಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅತಿಥಿ ಶಿಕ್ಷಕರನ್ನು ಗುಲಾಮರನ್ನಾಗಿ ನೋಡಿಕೊಳ್ಳಲಾಗುತ್ತಿದೆ ಸರ್ಕಾರ ಇವರ ಸಂಕಷ್ಟಗಳನ್ನ ನೋಡುತ್ತಿಲ್ಲ ಮತ್ತು ಸ್ಪಂದಿಸುತ್ತಿಲ್ಲ. ಇವತ್ತು ಕಾರ್ಮಿಕ ವರ್ಗ, ಶಿಕ್ಷಕ ವರ್ಗ, ಮತ್ತು ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ಹೋರಾಟ ಮಾಡುವ ಪರಿಸ್ಥಿತಿ ಈ ಸರ್ಕಾರದ ದುರ್ಬಲ ಆಡಳಿತದ ನಿದರ್ಶನವಾಗಿದೆ.

ಇವತ್ತು ಅತಿಥಿ ಶಿಕ್ಷಕರೊಂದಿಗೆ ಕೈ ಜೋಡಿಸದೆ ಪಾಠ ಮಾಡುವ ಸರ್ಕಾರಿ ಶಿಕ್ಷಕರು ಎನ್ ಈ ಪಿ 2020 ರ ಹೊಸ ಕರಾಳ ನೀತಿಯಿಂದ ಬೀದಿಗೆ ಬಂದು ಹೋರಾಟ ಮಾಡುವ ದಿನಗಳು ದೂರವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡ ಸಂಶುದ್ದೀನ್ ಎಚ್ಚರಿಸಿದರು ಹಾಗೂ ಸರ್ಕಾರ ಶೀಘ್ರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಧರಣಿಯಲ್ಲಿ ಅತಿಥಿ ಶಿಕ್ಷಕ ಸಂಘದ ಕಾರ್ಯದರ್ಶಿ ಚಿತ್ರಕಲಾ ಮತ್ತು ಪದಾಧಿಕಾರಿಗಳು, ಉಪಸ್ಥಿತರಿದ್ದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *