Connect with us

LATEST NEWS

ಮಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು…ಕೇರಳ ಮೂಲದ ಉದ್ಯಮಿಯ ಕೊಲೆ

ಮಂಗಳೂರು, ನವೆಂಬರ್ 03: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಸ್ಥಳೀಯವಾಗಿ ಫಾರ್ಮ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿರುವ ಘಟನೆ ಕಾವೂರಿನಲ್ಲಿ ನಡೆದಿದೆ.


ಮೃತರನ್ನು ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಎಂದು ಗುರುತಿಸಲಾಗಿದೆ. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರೆ, ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಸುರೇಂದ್ರನ್ ಅವರು ಮನೆಗೆ ಮರಳಿ ಬಂದಿದ್ದು, ಆ ಬಳಿಕ ದುಷ್ಕರ್ಮಿಗಳು ಕೊಲೆ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.

Facebook Comments

comments