DAKSHINA KANNADA
ಮಂಗಳೂರು : ಎಮ್ಮೆಕೆರೆಯಲ್ಲಿ ಈಜಾಡಿ ಮಾತು ಉಳಿಸಿದ ಸಚಿವ ದಿನೇಶ್ ಗುಂಡೂರಾವ್..!

ಮಂಗಳೂರು : ರಾಜ್ಯ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಮುಂಗಾರು ಮಳೆಯ ತಂಪಿನ ವಾತಾವರಣವನ್ನು ಅಸ್ವಾದಿಸುತ್ತಾ ಸಚಿವರು ಬೆಳ್ಳಂ ಬೆಳಗ್ಗೆ ನಗರದ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಈಜಿ ರಿಲಾಕ್ಸ್ ಆಗಿದ್ದಾರೆ.
ಸಚಿವರು ಈಜಾಡುವ ವಿಡಿಯೋ ಇದೀಗ ವೈರಲ್ ಆಗಿದೆ. 24.94 ಕೋಟಿ ರೂ. ವೆಚ್ಚದ ಈ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳವನ್ನು ಕಳೆದ ವರ್ಷ ನ. 24ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದ್ದರು.ಈ ಹಿಂದೆ ಈಜುಕೊಳ ಉದ್ಘಾಟನಾ ಸಂದರ್ಭದಲ್ಲಿ ಬರಲು ಆಗದೇ ಇರುವ ಕಾರಣ ಮುಂದೆ ಇಲ್ಲಿಯೆ ಈಜಾಡಲು ಬರುವುದಾಗಿ ತಿಳಿಸಿದ್ದರು.

ಇದೇ ಸಂದರ್ಭ ಈಜುಕೊಳದ ಕೆಲವು ನ್ಯೂನತೆಗಳನ್ನು ಪರಿಶೀಲಿಸಿದ ಸಚಿವರು ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಕ್ರಮಕ್ಕಾಗಿ ಸೂಚನೆ ನೀಡಿದರು. ಅಲ್ಲಿಯ ಲಾಕರ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರ ಸಮಸ್ಯೆ ಗಳ ಬಗ್ಗೆ ಮಾಹಿತಿ ತಿಳಿದು, ಸ್ಮಾರ್ಟ್ ಸಿಟಿಯ ಅಧಿಕಾರಿಗೆ ಸರಿಪಡಿಸಲು ಆದೇಶ ನೀಡಿದರು.
ಸ್ಮಾರ್ಟ್‌ಸಿಟಿ ರಿವರ್‌ಫ್ರಂಟ್ ಯೋಜನೆಯ ತಡೆಗೋಡೆ ಕುಸಿತದ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಿ, ವಾರದೊಳಗೆ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದರು.