DAKSHINA KANNADA
ಮಂಗಳೂರು: ಪಾವೂರಿನಲ್ಲಿ ಮೆಹಂದಿ ಪಾರ್ಟಿ – ದೂರು ದಾಖಲು

ಮಂಗಳೂರು, ಮೇ 28: ಕೊರೊನಾ ಲಾಕ್ಡೌನ್ ಮಾರ್ಗಸೂಚಿಯಂತೆ ಮದುವೆಗೆ ಅನುಮತಿ ಪಡೆದು, ವಿವಾಹದ ಮುನ್ನದ ಮೆಹಂದಿ ಕಾರ್ಯಕ್ರಮದಲ್ಲಿ ಗುಂಪುಗೂಡಿ ನೃತ್ಯ ಮಾಡಿದ ಆರೋಪದಡಿ ಮಂಗಳೂರಿನ ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನ ಪಾವೂರಿನಲ್ಲಿ ಮೇ 20ರಂದು ತಮ್ಮ ಮಗಳ ಮದುವೆ ಕಾರ್ಯಕ್ರಮ ನಡೆಸಲು ಶೋಭ ಎಂಬುವರು ಪಾವೂರು ಪಂಚಾಯತಿಯಿಂದ ಅನುಮತಿ ಪಡೆದಿದ್ದರು. ಮದುವೆಗೆ ಮಾತ್ರ ಅನುಮತಿ ಪಡೆದ ವಧುವಿನ ಕಡೆಯವರು ಮದುವೆಯ ಮುನ್ನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮ ಆಯೋಜಿಸಿದ್ದರು.

ಅನುಮತಿ ಇಲ್ಲದಿದ್ದರೂ ಧ್ವನಿವರ್ಧಕ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ಗಮನಕ್ಕೆ ಬಂದ ಬಳಿಕ ಪಾವೂರು ಪಂಚಾಯತಿ ಪಿಡಿಓ ಸುಧಾರಾಣಿ ಅವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿರುವುದರಿಂದ ಕಾನೂನು ಕ್ರಮ ಕೈಗೊಳ್ಳುವಂತೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಸೂಚಿಸಿದ್ದಾರೆ. ಅವರ ಆದೇಶ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.