LATEST NEWS
ಬಪ್ಪನಾಡು ಡೋಲು ಬಾರಿಸಿದ ಮೇಯರ್ ಕವಿತಾ ಸನಿಲ್

ಬಪ್ಪನಾಡು ಡೋಲು ಬಾರಿಸಿದ ಮೇಯರ್ ಕವಿತಾ ಸನಿಲ್
ಮಂಗಳೂರು, ಸೆಪ್ಟೆಂಬರ್ 26 : ಲೇಡಿ ಸಿಗಂ ಖ್ಯಾತಿಯ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರು ಇಂದು ಮುಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಇತರ ಸದಸ್ಯರುಗಳೊಂದಿಗೆ ಇತಿಹಾಸ ಪ್ರಸಿದ್ದ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಮಹಾ ನಗರ ಪಾಲಿಕೆಯ ಮಹಾ ಪೌರರು ಶ್ರೀ ದೇವಿಯ ದರ್ಶನ ಪಡೆದು , ಪಾರ್ಥನೆ ಸಲ್ಲಿಸಿದರು.
ಮೇಯರ್ ಅವರೊಂದಿಗೆ ಮಾಜಿ ಮೇಯರ್ , ಪಾಲಿಕೆ ಸದಸ್ಯರಾದ ಶಶಿಧರ ಶೆಟ್ಟಿ ಮತ್ತಿತರ ಪಾಲಿಕೆಯ ಸದಸ್ಯರುಗಳು ಉಪಸ್ಥಿತರಿದ್ದರು.
ಮಹಾ ಪೌರರಾದ ಕವಿತಾ ಸನಿಲ್ ಅವರು ನವರಾತ್ರಿಯ ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವೃತ ಆಚರಿಸುತ್ತಾ ಬಂದಿದ್ದಾರೆ. ಹಲವಾರು ವರ್ಷಗಳಿಂದ ಈ ಉಪವಾಸದ ವೃತವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದು, ಈ ಒಂಬತ್ತು ದಿನಗಳಲ್ಲಿ ಯಾವುಧೆ ಅನ್ನ ಆಹಾರ ಸ್ವೀಕರಿಸುವುದಿಲ್ಲ.
ಈ ಸಂದರ್ಭಗಳಲ್ಲಿ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಪಾರ್ಥನೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಇಂದು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿ ಅನುಗೃಹವನ್ನು ಬೇಡಿಕೊಂಡರು.
ಇದೇ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ದವಾದ ದೇವಸ್ಥಾನದ ಬಪ್ಪನಾಡು ಡೋಲನ್ನು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ
Continue Reading