DAKSHINA KANNADA
ಮಂಗಳೂರು : ಅಲ್ ಕಸ್ವಾ ಫ್ರೆಂಡ್ಸ್ ಗ್ರೂಪ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಮಂಗಳೂರು: ಅಲ್ ಕಸ್ವಾ ಪ್ರೆಂಡ್ಸ್ ಗ್ರೂಪ್ ಮಂಗಳೂರು ಇದರ ವತಿಯಿಂದ ದಿವಂಗತ ಸಮಾಜ ಸೇವಕರಾದ ಸಲೀಂ ಚಲ್ಲಿ ಬಂದರ್ ಮತ್ತು ಅಮೀರ್ ಕಂಚಿನಡ್ಕ ಇವರ ಸ್ಮರಣಾರ್ಥ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕಿನ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಇಂದು ನಗರದ ರಾವ್ ಅ್ಯಾನ್ಡ್ ರಾವ್ ವೃತ್ತದ ಬಳಿಯಿರುವ ಸಹಕಾರಿ ಸದನ ಕಟ್ಟಡದಲ್ಲಿ ಇಂದು ನಡೆಯಿತು. ಶಿಬಿರದಲ್ಲಿ ಒಟ್ಟು 100 ಮಂದಿ ರಕ್ತದಾನ ಮಾಡಿದರು.
ಕುದ್ರೋಳಿ ನಡುಪಳ್ಳಿ ಜಮ್ಮಾ ಮಸೀದಿಯ ಖತೀಬರಾದ ರಿಯಾಝ್ ಫೈಝಿ ಕಕ್ಕಿಂಜೆ ದುವಾ ನೆರವೇರಿಸಿದರು.

ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್, ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಕಂದಕ್, ಶಂಶುದ್ದೀನ್ ಕುದ್ರೋಳಿಯ, ಶಂಸುದ್ದೀನ್ ಬಂದರ್ ಡಾ ಕೆ ಮೋಹನ್ ಪೈ, ಶುಭ ಹಾರೈಸಿ ಮಾತನಾಡಿದರು.
ಸಂಸ್ಥೆಯ ಸಂಚಾಲಕರಾದ ನಝೀರ್ ಮೊಹಮದ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸಯ್ಯದ್ ಮುಷಾದಿಕ್,ಸಿರಾಜುದ್ದೀನ್, ಎ ರಿಫಾಯ್, ನಾಸಿರ್,ಎಮ್ಮೆಕೆರೆ ಸಲಾಂ,ಅನೀಸ್ ಬಂದರ್,ಡಿವೈಎಫ್ಐ ಜಿಲ್ಲಾಧ್ತಕ್ಷರಾದ ಬಿಕೆ ಇಮ್ತಿಯಾಜ್,ಯುವ ಜೆಡಿಎಸ್ ಮಂಗಳೂರು ದಕ್ಷಿಣಾ ಅಧ್ಯಕ್ಷರಾದ ಅಬ್ದುಲ್ ಸತ್ತರ್ , ಪಾಂಡೇಶ್ವರ ಠಾಣಿ ಪಿಎಸ್ಐ ಮನೋಹರ್,ಬಂದರು ಠಾಣಾ ಪಿಎಸ್ಐ ಮಂಜುಳಾ , ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ನಿಝಾಮ್ ಕಂಚಿನಡ್ಕ, ಯಾಸೀರ್ ಬೈಕಂಪಾಡಿ,ಯೂಸುಫ್ ಕೆಸಿ ರೋಡ್,ಅಶ್ರಫ್ ಆಸ್ರ, ಇಮ್ತಿಯಾಜ್,ಸಮದ್ ಕುದ್ರೋಳಿ, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಒಂದೇ ವರ್ಷದಲ್ಲಿ ಮೂರು ಬಾರಿ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿದ 17ರ ಹರೆಯದ ಇನಾಸ್ ಬಿಕೆ ಹಾಗೂ ಸಮಾಜ ಸೇವಕ್ ಹನೀಫ್ ಖಾಜಿ, ಪಿಎಸ್ಐ ಮನೋಹರ್ ಅವರನ್ನು ಸನ್ಮಾನಿಸಲಾಯಿತು.
ಮೈಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ ಮೊಹಮ್ಮದ್ ಅಶ್ರಫ್ ವಂದಿಸಿದರು.