LATEST NEWS
ಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಸಮೀಪ ಕೆತ್ತಿಕಲ್ಲ್ನಲ್ಲಿ ಗುಡ್ಡ ಕುಸಿತದ ಭೀತಿ
ಮಂಗಳೂರು ಜುಲೈ 21: ಶಿರೂರು ಗುಡ್ಡ ಕುಸಿತದ ರೀತಿಯಲ್ಲೇ ಇದೀಗ ಮಂಗಳೂರಿನಲ್ಲೂ ಹೆದ್ದಾರಿಯ ಮೇಲೆ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಸಣ್ಣ ಪ್ರಮಾಣ ಗುಡ್ಡ ಕುಸಿತ ಉಂಟಾಗುತ್ತಿರುವ ಘಟನೆ ಕೆತ್ತಿಕಲ್ಲ್ನಲ್ಲಿ ನಡೆದಿದೆ.
ಮಂಗಳೂರು ಮೂಡಬಿದಿರೆಯ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಹೆದ್ದಾರಿ ಕಾಮಗಾರಿಗಾಗಿ ಗುಡ್ಡ ಅಗೆಯಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಂಗಳೂರು-ಸೋಲಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರುನಿಂದ ಕಾರ್ಕಳದ ಸಾಣೂರುವರೆಗೆ ನಾಲ್ಕು ಲೇನ್ ಗಳಲ್ಲಿ ಪರಿವರ್ತಿಸುವ ಕಾಮಗಾರಿ ನಡೆಸುತ್ತಿದೆ. ಆದರೆ, ಕಾಮಗಾರಿಗಾಗಿ ಗುಡ್ಡವನ್ನು ಅವೈಜ್ಞಾನಿಕವಾಗಿ ಅಗೆದಿರುವ ಕಾರಣ ಗುಡ್ಡ ಕುಸಿಯುವ ಅಪಾಯ ಎದುರಾಗಿದೆ.
ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚಾರ ನಡೆಸುತ್ತಿದ್ದು, ಮತ್ತೊಂದು ಶಿರೂರು ರೀತಿಯ ದುರಂತವಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.