LATEST NEWS
ಮಂಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರ – ಕೈಬರ್ ಪಾಸ್ ಲೇನ್‌ನ ರಸ್ತೆಯಲ್ಲಿ ಗುಡ್ಡ ಕುಸಿತ
ಮಂಗಳೂರು ಜುಲೈ 03: ಮಂಗಳೂರಿನಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರಿನ ಕೆಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಠಿಯಾಗಿತ್ತು.
ಕರಾವಳಿಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಈ ನಡುವೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರಿನಲ್ಲಿ ಚರಂಡಿಗಳು ಉಕ್ಕಿ ಹರಿದು, ಮಲ್ಲಿಕಟ್ಟೆ, ಸುಭಾಷ್ ನಗರ, ಬಳ್ಳಾಲ್ ಭಾಗದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ನಗರದ ಪಿ.ವಿ.ಎಸ್ ವೃತ್ತದಿಂದ ಬಿಜೆಪಿ ಆಫೀಸ್ ಮುಂಭಾಗದಿಂದ ಹಂಪನಕಟ್ಟೆ ಬರುವ ಕೈಬರ್ ಪಾಸ್ ಲೇನ್‌ನ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು ಅಪಾಯವನ್ನು ಸೃಷ್ಟಿಸಿದೆ.
ಗುಡ್ಡ ಕುಸಿದ ಮೇಲ್ಭಾಗದಲ್ಲಿ ಕೋರ್ಟ್ ಆವರಣ ಮತ್ತು ರಸ್ತೆ ಇದ್ದು ನೂರಾರು ವಾಹಗಳು ನಿತ್ಯ ಈ ಮಾರ್ಗಲ್ಲಿ ಸಂಚರಿಸುತ್ತಿವೆ, ಇದೀಗ ಈ ಭಾಗದಲ್ಲಿ ಭೂ ಕುಸಿತ ಉಂಟಾದ ಕಾರಣ ಸಂಚಾರಕ್ಕೆ ಅಲ್ಪ ಪ್ರಮಾಣದಲ್ಲಿ ತೊಂದರೆಯಾಗಿದೆ. ಮತ್ತಷ್ಟು ಭೂ ಕುಸಿತ ಉಂಟಾದ್ರೆ ಕೋರ್ಟ್ ರಸ್ತೆ ಪ್ರದೇಶ ಕುಸಿಯುವ ಆತಂಕ ಎದುರಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 5ರ ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ 1 ರಿಂದ 3ರವರೆಗೆ ಯಲ್ಲೋ ಅಲರ್ಟ್, ಜುಲೈ 4 ಹಾಗೂ 5ರಂದು ಆರೆಂಜ್ ಅಲರ್ಟ್ ಘೋಷಿಸಿದೆ.