DAKSHINA KANNADA
ಮಂಗಳೂರು : ಆ ಬಸ್ ಸಿಬಂದಿಯ ಸಮಯ ಪ್ರಜ್ಞೆ, ಸಕಾಲಿಕ ಮಾಹಿತಿ ಇಲ್ಲವಾದಲ್ಲಿ ಜಾರಿಹೋಗುತ್ತಿತ್ತು ‘ಚಡ್ಡಿ ಗ್ಯಾಂಗ್’..!
ಅಂತಾರಾಜ್ಯ ದರೋಡೆಕೋರರ ಚಡ್ಡಿಗ್ಯಾಂಗ್ ನ್ನು ಬಂಧಿಸಿ ಪ್ರಕರಣ ಸುಖಾಂತ್ಯ ಕಾಣಲು ಪ್ರಮುಖ ಕಾರಣವಾದವರು ಕೆ ಎಸ್ ಆರ್ ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರು.
ಮಂಗಳೂರು : ಮಂಗಳೂರಿನ ಜನರ ನಿದ್ದೆ ಕೆಡಿಸಿದ ಅಂತರಾಜ್ಯ ದರೋಡೆಕೋರರ ಖತಾರ್ನಾಕ್ ಚಡ್ಡಿ ಗ್ಯಾಂಗನ್ನು ನಗರ ಪೊಲೀಸರು ಮಟ್ಟ ಹಾಕಿದ್ದಾರೆ. ಅದರಲ್ಲಿ ಸ್ಥಳ ಮಹಜರು ಸಂದರ್ಭ ಪೊಲೀಸರ ಮೇಲೆ ದಾಳಿ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ ಇಬ್ಬರ ಕಾಲುಗಳಿಗೆ ಮಂಗಳೂರು ಪೊಲೀಸರು ಗುಂಡೇಟು ನೀಡಿದ್ದಾರೆ.
ಗುಂಡೇಟು ತಿಂದ ಖದೀಮರಾದ ರಾಜು ಸಿಂಘಾನಿಯಾ ಮತ್ತು ಬಾಲಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ರೆ, ಹಲ್ಲೆಗೊಳಗಾದ ಪೊಲೀಸ್ ಎಎಸ್ಐ ವಿನಯ್, ಸಿಬಂದಿ ಶರತ್ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಡ್ಡಿ ಗ್ಯಾಂಗನ್ನು ಮಟ್ಟಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉರ್ವಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಭಾರತಿ ಮತ್ತು ಸಿಬಂದಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು 50 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಅಂತಾರಾಜ್ಯ ದರೋಡೆಕೋರರ ಚಡ್ಡಿಗ್ಯಾಂಗ್ ನ್ನು ಬಂಧಿಸಿ ಪ್ರಕರಣ ಸುಖಾಂತ್ಯ ಕಾಣಲು ಪ್ರಮುಖ ಕಾರಣವಾದವರು ಖಾಸಾಗಿ ಬಸ್ ಮತ್ತು ಕೆ ಎಸ್ ಆರ್ ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರು. ಅವರ ಸಮಯ ಪ್ರಜ್ಞೆ ಮತ್ತು ಅವರು ಪೊಲೀಸರಿಗೆ ನೀಡಿದ ನಿಖರ ಮಾಹಿತಿ ಆರೋಪಿಗಳನ್ನು ಬಂಧಿಸಲು ಸಹಕಾರಿಯಾಯಿತು. KSRTC ಮಂಗಳೂರು 3 ನೇ ಘಟಕದ ಸಿಬ್ಬಂದಿಗಳಾದ ಚಾಲಕ ಬಸವರಾಜ್ ಅಳ್ಳ ಪ್ಪ ಹಾಗೂ ಚಾಲಕ / ನಿರ್ವಾಹಕ ಹನುಮಂತ ಅಟಗಲ್ಲು ಹಾಗೂ ಖಾಸಾಗಿ ಚಾಲಕರಾದ ಮಹೇಶ್ ಹಾಗೂ ನಿರ್ವಹಕರಾದ ಸೀನಪ್ಪ ಅವರುಗಳು.
ಮಂಗಳವಾದ ದಿನಾಂಕ 9/07/2024 ಬೆಳಗಿನ ಜಾವ ಇದೆ ಚಡ್ಡಿಗ್ಯಾಂಗ್ ದರೋಡೆ ಕೋರರು ಮಂಗಳೂರಿನ ಕೋಟೆಕಣಿಯ ಮನೆಯಲ್ಲಿ ಮುಂಜಾನೆ ವೃದ್ದ ದಂಪತಿಯನ್ನು ಹಲ್ಲೆ ಮಾಡಿ ದರೋಡೆ ನಡೆಸಿ ಬನೆಯಲ್ಲಿ ಚಿನ್ನಾಭರಣ, ವಾಚುಗಳು ಮತ್ತು ನಗದನ್ನು ದೋಚಿ ಅದೇ ಮನೆಯವರ ಕಾರಿನಲ್ಲಿ ಉಡುಪಿ ಕಡೆಗೆ ತೆರಳಿದ್ದರು ಮೂಲ್ಕಿ ಬಳಿ ಹೆದ್ದಾರಿಯಲ್ಲಿ ಕಾರನ್ನು ಬಿಟ್ಟು ದಿಕ್ಕು ತಪ್ಪಿಸಲು ಮಂಗಳೂರು ಬಸ್ ಹತ್ತಿ ನಗರಕ್ಕೆ ವಾಪಾಸ್ ಬಂದು ಕೆಎಸ್‌ಆರ್ ಟಿಸಿ ಬಸ್ ಹತ್ತಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು KSRTC ಮಂಗಳೂರು 3 ನೇ ಘಟಕಕ್ಕೆ ಬಂದು ವಿಚಾರಿಸಿ ಸಿಸಿಟಿವಿ ವಿಡಿಯೋ ತೋರಿಸಿದಾಗ ಮೇಲೆ ತಿಳಿಸಿದ ಚಾಲಕ ಬಸವರಾಜ್ ಬಸ್ಸಿನ ವಿಡಿಯೋ ನೋಡಿ ಇದು ನಮ್ಮ ಘಟಕದ ಕಬ್ಬರಗಿ ಮಂಗಳೂರು ಸಾರಿಗೆ ಬಸ್ಸು ಎಂದಿದ್ದಾರೆ. ಆ ಬಸ್ಸಿನ ಚಾಲಕ / ನಿರ್ವಾಕರಾದ ಹನುಮಂತ ಅಟಗಲ್ಲು ಅವರನ್ನು ವಿಚಾರಿಸಿದಾಗ ಹೌದ್ ಅವರು4 ಜನ ಅಪರಿಚಿತರು ಮೂಲ್ಕಿ ಬಸ್ಟ್ಯಾಂಡ್ ನಲ್ಲಿ ನಮ್ಮ ಬಸ್ಸು ಹತ್ತಿದ್ದು ಆಮೇಲೆ ಮಂಗಳೂರಿನಲ್ಲಿ ಇಳಿದು ನಮ್ಮದೇ ಬೆಳಿಗ್ಗೆ 5.30 ಹೊರಡುವ ಮಂಗಳೂರು ಬೆಂಗಳೂರು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿರುತ್ತಾರೆ ಎಂದು ನಿಖರ ಮಾಹಿತಿ ನೀಡಿದ್ದಾರೆ. ತದನಂತರ ಪೊಲೀಸರು ಬೆಂಗಳೂರು ಚಾಲಕರ ಮತ್ತು ನಿರ್ವಾಹಕರಿಗೆ ವಿಚಾರಿಸಿದಾಗ ಕಳ್ಳರ ಇರುವಿಕೆ ಬಗ್ಗೆ ಸ್ಪಷ್ಟವಾಗುತ್ತದೆ. ಆ ಮಾಹಿತಿ ಪಡೆದು ಸಕ್ಲೇಶಪುರ ಪೊಲೀಸರ ಸಹಾಯದಿಂದ ಬಸ್ಸನ್ನು ಅಡ್ಡಗಟ್ಟಿ ಈ ಚಡ್ಡಿಗ್ಯಾಂಗ್ ದರೋಡೆ ಕೋರರನ್ನು ಬಂಧಿಸಲು ಯಶಸ್ವಿ ಆಗಿರುತ್ತಾರೆ. ksrtc ಬಸ್ ಸಿಬಂದಿಗಳ ಸಕಾಲಿಕ ಮಾಹಿತಿ ಇಲ್ಲದೇ ಹೋದಲ್ಲಿ ಸಕಾಲದಲ್ಲಿ ದರೋಡೆಕೋರರನ್ನು ಬಂಧಿಸಲು ಅಸಾಧ್ಯವಾಗುತ್ತಿತ್ತು ಮತ್ತು ಮಧ್ಯಪ್ರದೇಶದ ಈ ತಂಡ ಬೇರ್ಪಟ್ಟು ಊರು ಸೇರಿದ್ದರೆ ಆರೋಪಿಗಳ ಬಂಧನ ಇನ್ನೂ ಕ್ಲಿಷ್ಟಕರವಾಗುತ್ತಿತ್ತು. ಸಕಾಲಿಕ ಸಮಯ ಪ್ರಜ್ಞೆ ತೋರಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಅಭಿನಂದನರ್ಹರು.